ಕೆನ್ಯಾ ಧರ್ಮಾಧ್ಯಕ್ಷರು: ನಮ್ಮ ದೇಶದ ಯುವ ಜನರು ನಂಬಿಕೆಗೆ ಅರ್ಹರಾಗಿದ್ದಾರೆ

ಇತ್ತೀಚಿಗಷ್ಟೇ ಕೆನ್ಯಾ ದೇಶದಲ್ಲಿ ಸಾವಿರಾರು ಯುವಕ ಯುವತಿಯರು ರಾಜಕೀಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ರಸ್ತೆಗಳಿಗೆ ಬಂದಿದ್ದರು. ದೇಶದ ಶೇಕಡ ಎಪ್ಪತ್ತರಷ್ಟು ಇರುವ ಜನತೆಗೆ ನಾವು ನಂಬಿಕೆಯನ್ನು ನೀಡಬೇಕಿದೆ. ನಮ್ಮ ಯುವ ಜನತೆ ನಂಬಿಕೆಗೆ ಅರ್ಹರಿದ್ದಾರೆ ಎಂದು ಕೆನ್ಯಾದ ಕಥೋಲಿಕ ಧರ್ಮಾಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಇತ್ತೀಚಿಗಷ್ಟೇ ಕೆನ್ಯಾ ದೇಶದಲ್ಲಿ ಸಾವಿರಾರು ಯುವಕ ಯುವತಿಯರು ರಾಜಕೀಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ರಸ್ತೆಗಳಿಗೆ ಬಂದಿದ್ದರು. ದೇಶದ ಶೇಕಡ ಎಪ್ಪತ್ತರಷ್ಟು ಇರುವ ಜನತೆಗೆ ನಾವು ನಂಬಿಕೆಯನ್ನು ನೀಡಬೇಕಿದೆ. ನಮ್ಮ ಯುವ ಜನತೆ ನಂಬಿಕೆಗೆ ಅರ್ಹರಿದ್ದಾರೆ ಎಂದು ಕೆನ್ಯಾದ ಕಥೋಲಿಕ ಧರ್ಮಾಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ. 

೧೯೯೦ ರಲ್ಲಿ ಸ್ವತಂತ್ರ ಚುನಾವಣೆಗಳಿಗಾಗಿ ನಡೆದ ಪ್ರತಿಭಟನೆಯನ್ನು ಕೆನ್ಯಾ ದೇಶದ ಜನರು ಸಬಾ ಸಬಾ ದಿನ ಎಂದು ಆಚರಿಸುತ್ತಾರೆ. ಇದೀಗ ಈ ದಿನವನ್ನು ಆಚರಿಸಲು ಸಾವಿರಾರು ಯುವ ಯುವತಿಯರು ರಾಜಕೀಯ ಸಾಂಘಿಕ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. ಈ ದಿನದ ಆಚರಣೆಯ ವೇಳೆ ಕೆನ್ಯಾದ ಧರ್ಮಾಧ್ಯಕ್ಷರು ಯುವ ಜನತೆ ದೇಶದ ನಂಬಿಕೆಗೆ ಅರ್ಹರು ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ನೈರೋಬಿಯ ಮಹಾಧರ್ಮಾಧ್ಯಕ್ಷರಾದ ಫಿಲಿಪ್ ಅರ್ನಾಲ್ಡೋ ಅವರು ನಮ್ಮ ದೇಶದ ಯುವ ಜನತೆಗೆ ಸಾಕಷ್ಟು ವಿಷಯಗಳಲ್ಲಿ ಸ್ಪಷ್ಟತೆ ಇದೆ. ದೇಶದ ಬಹು ಸಂಖ್ಯಾತರಾಗಿರುವ ಇವರಿಗೆ ನಾವು ದೇಶವನ್ನು ನೀಡಬೇಕಿದೆ. ಅವರು ಈ ದೇಶದ ಭವಿಷ್ಯವನ್ನು ಬೆಳಗಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.

ಇನ್ನಿತರ ಧರ್ಮಾಧ್ಯಕ್ಷರುಗಳೂ ಸಹ ಈ ಮಾತುಗಳನ್ನು ಅನುಮೋದಿಸಿದ್ದಾರೆ.  

01 August 2024, 16:19