ಹುಡುಕಿ

ಚೀನಾ: ಧರ್ಮಾಧ್ಯಕ್ಷ ದೀಕ್ಷೆ ಪಡೆದ ಬೀಜಿಂಗ್'ನ ನೂತನ ಸಹಾಯಕ ಧರ್ಮಾಧ್ಯಕ್ಷರು

ಪವಿತ್ರ ಪೀಠ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ದೇಶದ ನಡುವೆ ನಡೆದ ತಾತ್ಕಾಲಿಕ ಒಪ್ಪಂದದಂತೆ ಫಾದರ್ ಮತ್ತಿಯೋ ಝೆನ್ ಝೂಬಿನ್ ಅವರನ್ನು ಬೀಜಿಂಗ್ ಧರ್ಮಕ್ಷೇತ್ರದ ಸಹಾಯಕ (coadjutor) ಧರ್ಮಾಧ್ಯಕ್ಷರನ್ನಾಗಿ ಅಭಿಷೇಕಿಸಲಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರ ಅನುಮೋದನೆಯ ನಂತರ ಫಾದರ್ ಮತ್ತಿಯೋ ಝೆನ್ ಝೂಬಿನ್ ಅವರನ್ನು ಬೀಜಿಂಗ್ ಧರ್ಮಕ್ಷೇತ್ರದ ಸಹಾಯಕ (coadjutor) ಧರ್ಮಾಧ್ಯಕ್ಷರನ್ನಾಗಿ ಅಭಿಷೇಕಿಸಲಾಗಿದೆ.

ಪವಿತ್ರ ಪೀಠ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ದೇಶದ ನಡುವೆ ನಡೆದ ತಾತ್ಕಾಲಿಕ ಒಪ್ಪಂದದಂತೆ ಫಾದರ್ ಮತ್ತಿಯೋ ಝೆನ್ ಝೂಬಿನ್ ಅವರನ್ನು ಬೀಜಿಂಗ್ ಧರ್ಮಕ್ಷೇತ್ರದ ಸಹಾಯಕ (coadjutor) ಧರ್ಮಾಧ್ಯಕ್ಷರನ್ನಾಗಿ ಅಭಿಷೇಕಿಸಲಾಗಿದೆ.

ವ್ಯಾಟಿಕನ್ ಮಾಧ್ಯಮ ಪ್ರಕಟಣೆಯ ಪ್ರಕಾರ ಈ ಧರ್ಮಾಧ್ಯಕ್ಷೀಯ ದೀಕ್ಷೆಯು ಅಕ್ಟೋಬರ್ 25, 2024 ರಂದು ನಡೆದಿದೆ.

ಆಗಸ್ಟ್ 28, 2024 ರಲ್ಲಿ ಪೋಪ್ ಫ್ರಾನ್ಸಿಸ್ ಅವರು ಪವಿತ್ರ ಪೀಠ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ದೇಶದ ನಡುವೆ ನಡೆದ ತಾತ್ಕಾಲಿಕ ಒಪ್ಪಂದದ ನಿಯಮಗಳ ಪ್ರಕಾರ ಫಾದರ್ ಮತ್ತಿಯೋ ಝೆನ್ ಝೂಬಿನ್ ಅವರನ್ನು ಬೀಜಿಂಗ್ ಧರ್ಮಕ್ಷೇತ್ರದ ಸಹಾಯಕ (coadjutor) ಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದರು.

ನೂತನ ಧರ್ಮಾಧ್ಯಕ್ಷರ ಕುರಿತ ಮಾಹಿತಿ

ಫಾದರ್ ಮತ್ತಿಯೋ ಝೆನ್ ಝೂಬಿನ್ ಅವರು ಮೇ 10, 1970 ರಂದು ಶಾಂಕ್ಷಿ ಎಂಬಲ್ಲಿ ಜನಿಸಿದರು. 1988-1993 ರವರೆಗೆ ಇವರು ಬೀಜಿಂಗ್ ಫಿಲಾಸಫಿಕಲ್ ಹಾಗೂ ಥಿಯಾಲಜಿಕಲ್ ಸೆಮಿನರಿಯಲ್ಲಿ ವ್ಯಾಸಾಂಗವನ್ನು ಪೂರೈಸಿದರು. 1993-1997 ರವರೆಗೆ ಅಮೇರಿಕದ ಸೇಂಟ್ ಜಾನ್ಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗವನ್ನು ಮಾಡಿದರು. 1998 ರಲ್ಲಿ ಗುರುವಾಗಿ ಅಭಿಷೇಕಿತರಾದ ನಂತರ ಇವರು ಕಿರಿಯ ಗುರುಮಠದ ರೆಕ್ಟರ್ ಸೇರಿದಂತೆ ನಗರದ ವಿವಿಧ ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಧರ್ಮಾಧ್ಯಕ್ಷರ ಪದವಿಗೆ ಇವರನ್ನು ಪರಿಗಣಿಸುವಾಗ ಇವರು ಬೀಜಿಂಗ್ ಧರ್ಮಕ್ಷೇತ್ರದ ಚಾನ್ಸಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

25 October 2024, 13:55