ಹುಡುಕಿ

2024.12.10 Sister Joicy Joy advocating Human rights to tribals 2024.12.10 Sister Joicy Joy advocating Human rights to tribals 

ಭಾರತದಲ್ಲಿ ವಕೀಲ ಸನ್ಯಾಸಿನಿಯು ಮಾನವ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನದಂದು, ಕಾನೂನು ವ್ಯವಸ್ಥೆಯ ಮೂಲಕ ಬುಡಕಟ್ಟು ಜನರ ಪರ ವಕೀಲರಾಗಿ ಕೆಲಸ ಮಾಡುತ್ತಿರುವ ಭಾರತೀಯ ಸನ್ಯಾಸಿನಿ ಮತ್ತು ವಕೀಲರಾದ ಸಿಸ್ಟರ್ ಜಾಯ್ಸಿರವರ ಕೆಲಸವನ್ನು ನಾವು ಅನ್ವೇಷಿಸುತ್ತೇವೆ.

ಸಿಸ್ಟರ್ ಫ್ಲೋರಿನಾ ಜೋಸೆಫ್ SCN ರವರಿಂದ

1948ರಿಂದ, ಪ್ರಪಂಚದಾದ್ಯಂತ ಡಿಸೆಂಬರ್ 10ನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತದೆ.

ಕಳೆದ ವರ್ಷ, ಈ ಸಂದರ್ಭದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ತ್ರಿಕಾಲ ಪ್ರಾರ್ಥನೆಯ ಸಮಯದಲ್ಲಿ, "ಮಾನವ ಹಕ್ಕುಗಳ ಬದ್ಧತೆ ಎಂದಿಗೂ ಮುಗಿಯುವುದಿಲ್ಲ!" "ಶಾಂತಿಯುತ ಸಹಬಾಳ್ವೆಗಾಗಿ ಬುದ್ಧಿವಂತಿಕೆಯಿಂದ ಮತ್ತು ತಾಳ್ಮೆಯಿಂದ ಕೆಲಸ ಮಾಡಿದ ಪುರುಷರು ಮತ್ತು ಮಹಿಳೆಯರ" ಮಾದರಿಯನ್ನು ಅನುಸರಿಸಲು ಪ್ರತಿಯೊಬ್ಬರನ್ನು ಆಹ್ವಾನಿಸುತ್ತದೆ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳನ್ನು ರಕ್ಷಿಸಲು ನಿಸ್ವಾರ್ಥ ಸೇವೆ ಸಲ್ಲಿಸುವ ಅನೇಕರಲ್ಲಿ ಸಿಸ್ಟರ್. ಜಾಯ್ಸಿ ಜಾಯ್ ಕೂಡ ಒಬ್ಬರಾಗಿದ್ದಾರೆ. ವೃತ್ತಿಯಲ್ಲಿ ವಕೀಲೆ, ಅವರು ಭಾರತದ ಕೇರಳದ ವಯನಾಡ್ ಜಿಲ್ಲೆಯ ಅಂಚಿನಲ್ಲಿರುವ ಗುಂಪುಗಳು, ವಿಶೇಷವಾಗಿ ಬುಡಕಟ್ಟು ಜನರು, ಮಹಿಳೆಯರು, ಮಕ್ಕಳು ಮತ್ತು ಸಣ್ಣ ಪ್ರಮಾಣದ ರೈತರ ಜೀವನ, ಘನತೆ, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಅವರ ಪರ ನಿಂತಿದ್ದಾರೆ.

ಕಾನೂನು ಸಚಿವಾಲಯ
ಪನಿಯಾ ಬುಡಕಟ್ಟು ಸಮುದಾಯದ ಮಹಿಳೆಯ ಆಕಸ್ಮಿಕ ಮರಣಕ್ಕೆ ಪರಿಹಾರವನ್ನು ಒಳಗೊಂಡ ಸವಾಲಿನ ಪ್ರಕರಣದೊಂದಿಗೆ ಕಾನೂನು ವಕಾಲತ್ತುಗಳಲ್ಲಿ ಸಿಸ್ಟರ್. ಜಾಯ್ಸಿರವರ ಸಚಿವಾಲಯವು ಪ್ರಾರಂಭವಾಯಿತು. ಈ ಪ್ರಕರಣಕ್ಕೆ ಸಂಬಂದಿಸಿದ ಆಕೆಯ ಎಲ್ಲಾ ಪ್ರಯತ್ನಗಳು ವಿಜಯಶಾಲಿಯಾದವು, ಕುಟುಂಬವು ಸರ್ಕಾರದಿಂದ ಗಣನೀಯ ಪರಿಹಾರವನ್ನು ಪಡೆಯಿತು. ಘಟನೆಯನ್ನು ನೆನಪಿಸಿಕೊಳ್ಳುತ್ತಾ, ವ್ಯಾಟಿಕನ್ ಸುದ್ಧಿಗೆ ಈ ಯಶಸ್ಸು ಕಾನೂನು ಸಮರ್ಥನೆಯ ಪರಿವರ್ತಕ ಶಕ್ತಿಯಲ್ಲಿ ತನ್ನ ನಂಬಿಕೆಯನ್ನು ಬಲಪಡಿಸಿತು ಎಂದು ಹೇಳಿದರು.

ಕೇರಳ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಡಿಯಲ್ಲಿ ಕಾನೂನು ಸಲಹೆಗಾರರಾಗಿ ನೇಮಕಗೊಂಡಾಗ ಸಿಸ್ಟರ್. ಜಾಯ್ಸಿರವರ ಪಾತ್ರವು ಮತ್ತಷ್ಟು ವಿಸ್ತರಿಸಿತು. ಈ ಸ್ಥಾನವು ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು ಪರಿಹರಿಸಲು ಸಾಧ್ಯವಾಗಿಸಿತು, ಸಂತ್ರಸ್ತರಿಗೆ ಉಚಿತ ಕಾನೂನು ಪ್ರಾತಿನಿಧ್ಯ ಮತ್ತು ಮಾನಸಿಕ ಸಹಾಯವನ್ನು ಒದಗಿಸಲು ಸಹಾಯಕಾರಿಯಾಯಿತು. ಐದು ಪಂಚಾಯತ್‌ಗಳಲ್ಲಿ (ಸ್ಥಳೀಯ ಆಡಳಿತಗಳು) ಅಧಿಕಾರ ವ್ಯಾಪ್ತಿಯೊಂದಿಗೆ, ಅವರು ಕಾನೂನು ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಹೆಚ್ಚಿನ ಅಧಿಕಾರವನ್ನು ಪಡೆದರು.

ಸಿಸ್ಟರ್. ಜಾಯ್ಸಿಯವರನ್ನು ಸಾಮಾನ್ಯ ಸ್ವಯಂಸೇವಕರ ಸಮರ್ಪಿತ ತಂಡವು ಬೆಂಬಲಿಸುತ್ತಿದೆ, ಸಿನೊಡಾಲಿಟಿಯ ಧರ್ಮಸಭೆಯ ಕರೆಗೆ ಅನುಗುಣವಾಗಿ ಸಹಯೋಗದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಒಟ್ಟಾಗಿ, ಅವರು ಕಾನೂನು ಮತ್ತು ಭಾವನಾತ್ಮಕ ಸವಾಲುಗಳನ್ನು ಪರಿಹರಿಸುವ ಮೂಲಕ ಜಿಲ್ಲೆಯ ಅಂಚಿನಲ್ಲಿರುವವರ ಪ್ರಾರ್ಥಮಿಕ ಅಗತ್ಯಗಳನ್ನು ಪೂರೈಸುತ್ತಿದ್ದಾರೆ.

ಒಂದು ವರ್ಷದ ವಕಾಲತ್ತು
ಕಳೆದ ವರ್ಷದಲ್ಲಿ, ಸಿಸ್ಟರ್. ಜಾಯ್ಸಿರವರು 105 ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು, 30 ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು, 17 ಭೂ ಆಸ್ತಿ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಿದ್ದಾರೆ ಮತ್ತು ಮಾನವ ಹಕ್ಕುಗಳಿಗಾಗಿ ವ್ಯಾಪಕವಾದ ವಕಾಲತ್ತುಗಳಲ್ಲಿ ತೊಡಗಿರುವ 117 ಕೌನ್ಸೆಲಿಂಗ್ ಸೆಷನ್‌/ ಸಲಹಾ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ತನ್ನ ಸಮರ್ಪಣೆ ಮತ್ತು ವಿಶ್ವಾಸದ ಮೂಲಕ, ನಜರೇತಿನ ಚಾರಿಟಿಯ ಸಹೋದರಿಯರ ಸಭೆಯ ಸಿಸ್ಟರ್. ಜಾಯ್ಸಿರವರು, ಹೆಚ್ಚು ನ್ಯಾಯಯುತ ಸಮಾಜವನ್ನು ರಚಿಸಲು ತನ್ನ ದೈವಕರೆಯನ್ನು ಜೀವಂತವಾಗಿರಿಸಿ ಜೀವಿಸುತ್ತಾ, ಮಾನವ ಹಕ್ಕುಗಳ ಗಡಿ ಕಾನೂನು ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 

10 December 2024, 13:59