ಮೆಡ್ಜುಗೋರಿಯೇ ಯುವಜನತೆಯ ಹಬ್ಬದಲ್ಲಿ ಪೋಪ್: ನಿಜ ಅನುಯಾಯಿಯಾದ ಮಾತೆ ಮರಿಯಮ್ಮನವರಂತೆ ಬದುಕಿರಿ
ವಿಶ್ವಗುರು ಫ್ರಾನ್ಸಿಸರು ಮೆಡ್ಜುಗೋರಿಯೇ ಯುವಜನತೆಯ ಹಬ್ಬದಲ್ಲಿ ಪಾಲ್ಗೊಂಡಿದ್ದ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನೀವೆಲ್ಲರೂ ಯೇಸುವಿನ ನಿಜ ಅನುಯಾಯಿಯಾಗಿದ್ದ ಮಾತೆ ಮರಿಯಮ್ಮನವರ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸರು ಮೆಡ್ಜುಗೋರಿಯೇ ಯುವಜನತೆಯ ಹಬ್ಬದಲ್ಲಿ ಪಾಲ್ಗೊಂಡಿದ್ದ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನೀವೆಲ್ಲರೂ ಯೇಸುವಿನ ನಿಜ ಅನುಯಾಯಿಯಾಗಿದ್ದ ಮಾತೆ ಮರಿಯಮ್ಮನವರ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
"ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ" ಎಂಬ ಶೀರ್ಷಿಕೆಯ ಮೇಲೆ ಆಯೋಜಿಸಲಾಗಿರುವ ಮೆಡ್ಜುಗೋರಿಯೇ ಯುವಜನ ಸಮಾವೇಷದಲ್ಲಿ ಭಾಗವಹಿಸಿರುವ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡಲು ಪೋಪ್ ಹರ್ಷಚಿತ್ತರಾಗಿದ್ದರು. ಮೆಡ್ಜುಗೋರಿಯೇ ಎಂಬ ಪ್ರದೇಶವು ಮಾತೆ ಮರಿಯಮ್ಮನವರು ದರ್ಶನವಿತ್ತ ಪ್ರದೇಶವಾಗಿದ್ದು ಇಲ್ಲಿ ಈ ಯುವ ಹಬ್ಬವು ನಡೆಯುತ್ತಿದೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಯೇಸುವನ್ನು ಹಿಂಬಾಲಿಸಬೇಕೆಂದರೆ ಅವರ ಅನುಯಾಯಿಯಾಗಿ ಜೀವಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಲು ಮಾತೆ ಮರಿಯಮ್ಮನವರ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದರು.
02 ಆಗಸ್ಟ್ 2024, 18:08