ಪವಿತ್ರ ನಾಡಿನಲ್ಲಿ ಶಾಂತಿ ಕದಡಬೇಡಿ; ಯುದ್ಧ ಎಂದಿಗೂ ಸೋಲೆ!: ಪೋಪ್ ಫ್ರಾನ್ಸಿಸ್

ಭಾನುವಾರದ ತಮ್ಮ ದೇವದೂತನ ಸಂದೇಶ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ಮಾತನಾಡಿ, ಯುದ್ಧ ಎಂದಿಗೂ ಸೋಲೆ, ಹಾಗಾಗಿ ಯುದ್ಧವನ್ನು ನಿಲ್ಲಿಸಿ ಎಂದು ಶಾಂತಿಗಾಗಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರ ನಾಡಿನ ಕುರಿತು ವಿಶೇಷ ಗಮನವನ್ನು ಹರಿಸಿದ ಅವರು, ದೇವರ ಶಾಂತಿಯುತ ನಾಡಾದ ಪವಿತ್ರ ನಾಡಿನಲ್ಲಿ ಶಾಂತಿಯನ್ನು ಕದಳಬೇಡಿ ಎಂದು ಹೇಳಿದ್ದಾರೆ.

ವರದಿ: ಮೈಕೆಲ್ ರವಿಯಾರ್ಟ್, ಅಜಯ್ ಕುಮಾರ್

ಭಾನುವಾರದ ತಮ್ಮ ದೇವದೂತನ ಸಂದೇಶ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ಮಾತನಾಡಿ, ಯುದ್ಧ ಎಂದಿಗೂ ಸೋಲೆ, ಹಾಗಾಗಿ ಯುದ್ಧವನ್ನು ನಿಲ್ಲಿಸಿ ಎಂದು ಶಾಂತಿಗಾಗಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರ ನಾಡಿನ ಕುರಿತು ವಿಶೇಷ ಗಮನವನ್ನು ಹರಿಸಿದ ಅವರು, ದೇವರ ಶಾಂತಿಯುತ ನಾಡಾದ ಪವಿತ್ರ ನಾಡಿನಲ್ಲಿ ಶಾಂತಿಯನ್ನು ಕದಳಬೇಡಿ ಎಂದು ಹೇಳಿದ್ದಾರೆ.

ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಯುದ್ಧ ಎಂದರೆ ವಿನಾಶ ಎಂದರ್ಥ. ಇದರಲ್ಲಿ ಅಪಾರ ಸಾವು ನೋವು ಸಂಭವಿಸುತ್ತದೆ. ಅನೇಕ ಮುಗ್ಧ ಜನರು, ಮುಗ್ಧ ಮಕ್ಕಳು ತಮ್ಮದಲ್ಲದ ತಪ್ಪಿಗೆ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ವಿಶ್ವದ ರಾಜಕೀಯ ನಾಯಕರುಗಳು ಸಂಘರ್ಷವನ್ನು ಬದುಕುತ್ತಿ ಸಂವಾದವನ್ನು ನಡೆಸುವ ಎದೆಗಾರಿಕೆಯನ್ನು ತೋರಬೇಕು. ಯುದ್ಧದಿಂದ ಆಗುತ್ತಿರುವ ಅಪಾರ ಸಾವು ನೋವುಗಳನ್ನು ಕೂಡಲೇ ನಿಲ್ಲಿಸಬೇಕು. ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಅವರು ಶಾಂತಿಯ ಕುರಿತು ತಮ್ಮ ಮನವಿಯನ್ನು ನವೀಕರಿಸಿದರು.

04 August 2024, 18:38