ಹುಡುಕಿ

ಮಾನೋಸ್ ಉನಿಡಾಸ್ ಸಂಸ್ಥೆಯ ಪ್ರತಿನಿಧಿಗಳುನ ಪೋಪ್ ಫ್ರಾನ್ಸಿಸ್ ಅವರೊಂದಿಗೆ. ಮಾನೋಸ್ ಉನಿಡಾಸ್ ಸಂಸ್ಥೆಯ ಪ್ರತಿನಿಧಿಗಳುನ ಪೋಪ್ ಫ್ರಾನ್ಸಿಸ್ ಅವರೊಂದಿಗೆ.  (VATICAN MEDIA Divisione Foto)

ಮಾನೋಸ್ ಉನಿಡಾಸ್ ಪ್ರತಿನಿಧಿಗಳಿಗೆ ಪೋಪ್: ಮಾತೆ ಮರಿಯ ನಿಮ್ಮ ಸೇವಾಕಾರ್ಯದ ಮಾದರಿಯಾಗಿದ್ದಾರೆ

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ "ಮಾನೊಸ್ ಉನಿಡಾಸ್" (ಕರಗಳು ಒಂದಾಗಿ) ಎಂಬ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ, ಈ ಸಂಸ್ಥೆಯ ಮಾನವೀಯ ಸೇವಾಕಾರ್ಯಗಳ ಹಿಂದಿರುವ "ನಾರಿ ಶಕ್ತಿ"ಯನ್ನು ಶ್ಲಾಘಿಸಿದರು. ಇದೇ ವೇಳೆ ಅವರು ಮಾತೆ ಮರಿಯ ನಿಮ್ಮ ಸೇವಾಕಾರ್ಯದ ಮಾದರಿಯಾಗಿದ್ದಾರೆ ಎಂದು ಹೇಳಿದರು.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ "ಮಾನೊಸ್ ಉನಿಡಾಸ್" (ಕರಗಳು ಒಂದಾಗಿ) ಎಂಬ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ, ಈ ಸಂಸ್ಥೆಯ ಮಾನವೀಯ ಸೇವಾಕಾರ್ಯಗಳ ಹಿಂದಿರುವ "ನಾರಿ ಶಕ್ತಿ"ಯನ್ನು ಶ್ಲಾಘಿಸಿದರು. ಇದೇ ವೇಳೆ ಅವರು ಮಾತೆ ಮರಿಯ ನಿಮ್ಮ ಸೇವಾಕಾರ್ಯದ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಮಾನೋಸ್ ಉನಿಡಾಸ್ ಎಂಬುದು ಜಾಗತಿಕ ಹಸಿವಿನ ವಿರುದ್ಧ ಹೋರಾಡುತ್ತಿರುವ ಸ್ಪೇನ್ ದೇಶದ ಮಹಿಳೆಯರ ಗುಂಪಾಗಿದ್ದು, ಇವರು ಈಗಷ್ಟೇ ಪ್ರಗತಿಯನ್ನು ಹೊಂದುತ್ತಿರುವ ದೇಶಗಳಲ್ಲಿನ ಹಸಿವು, ಶಿಕ್ಷಣದ ಕೊರತೆ ಹಾಗೂ ಬೆಳವಣಿಗೆ ಕುಂಠಿತ ಸಮಸ್ಯೆಗಳ ವಿರುದ್ಧ ಹೋರಾಡುತ್ತಾ, ಅಲ್ಲಿನ ಜನರಿಗೆ ನೆರವನ್ನು ನೀಡುತ್ತಿದ್ದಾರೆ.

ಅವರ ಸೇವಾಕಾರ್ಯದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಿಮ್ಮ ಸೇವಾಕಾರ್ಯದ ಮಾದರಿ ಮಹಿಳೆಯರಲ್ಲೇ ಅತಿ ಶ್ರೇಷ್ಠ ಮಹಿಳೆಯಾದ ಮಾತೆ ಮರಿಯಮ್ಮನವರ ಮಾದರಿಯನ್ನು ಅನುಸರಿಸಬೇಕು" ಎಂದು ಕಿವಿಮಾತನ್ನು ಹೇಳಿದರು. ನೀವು ನಿಮ್ಮ ಸ್ವಯಂಸೇವಾ ಕಾರ್ಯವನ್ನು ಸುಂದರವಾಗಿ, ದೀನತೆಯಿಂದ ದೇವರ ಅನುಗ್ರಹದಿಂದ ಮುಂದುವರೆಸಿರಿ ಎಂದು ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಹೇಳಿದರು.

09 December 2024, 16:21