ಹುಡುಕಿ

ದೈವಶಾಸ್ತ್ರಜ್ಞರಿಗೆ ಪೋಪ್: ಸಿದ್ಧಾಂತ ಎಂಬುದು ವಾಸ್ತವತೆಯನ್ನು ಕೊಲ್ಲುತ್ತದೆ

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ವ್ಯಾಟಿಕನ್ ನಗರದಲ್ಲಿ ಪೊಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾನಿಲಯದಲ್ಲಿ ದೈವಶಾಸ್ತ್ರದ ಕುರಿತು ನಡೆಯುತ್ತಿರುವ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೈವಶಾಸ್ತ್ರಜ್ಞರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಅವರು ಸಿದ್ಧಾಂತ ಎಂಬುದು ವಾಸ್ತವತೆಯನ್ನು ಕೊಲ್ಲುತ್ತದೆ ಹಾಗೂ ಜನರಿಗೆ ಮೋಸವೆಸಗುತ್ತದೆ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ವ್ಯಾಟಿಕನ್ ನಗರದಲ್ಲಿ ಪೊಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾನಿಲಯದಲ್ಲಿ ದೈವಶಾಸ್ತ್ರದ ಕುರಿತು ನಡೆಯುತ್ತಿರುವ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೈವಶಾಸ್ತ್ರಜ್ಞರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಅವರು ಸಿದ್ಧಾಂತ ಎಂಬುದು ವಾಸ್ತವತೆಯನ್ನು ಕೊಲ್ಲುತ್ತದೆ ಹಾಗೂ ಜನರಿಗೆ ಮೋಸವೆಸಗುತ್ತದೆ ಎಂದು ಹೇಳಿದ್ದಾರೆ.

ವ್ಯಾಟಿಕನ್ನಿನ ಶಿಕ್ಷಣ ಹಾಗೂ ಸಂಸ್ಕೃತಿ ಸಚಿವಾಲಯವು ಈ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಪೊಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿತ್ತು. ವಿವಿಧ ದೇಶಗಳು ಸುಮಾರು 500 ಕ್ಕೂ ಹೆಚ್ಚು ದೈವಶಾಸ್ತ್ರಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ಸಮಾಜದಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ವಿವಿಧ ರೀತಿಯ ಹಾಗೂ ಶೈಲಿಯ ದೈವಶಾಸ್ತ್ರದ ಅಗತ್ಯವಿದೆ ಎಂಬ ಕುರಿತು ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದರು.

ಸಮಾಜದಲ್ಲಿ ಹಾಗೂ ಧರ್ಮಸಭೆಯಲ್ಲಿ ದೈವಶಾಸ್ತ್ರಜ್ಞರ ಪಾತ್ರದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ದೈವಶಾಸ್ತ್ರ ಎಂಬುದು ಬೆಳಕಿದ್ದಂತೆ. ಈ ಜಗತ್ತಿಗೆ ಕಾಣದ್ದನ್ನು ಅದು ತನ್ನ ಬೆಳಕಿನ ಮೂಲಕ ತೋರಿಸುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಇದು ದೇವರ, ಪ್ರಭು ಯೇಸುಕ್ರಿಸ್ತರ ಬೆಳಕನ್ನು ಈ ಲೋಕಕ್ಕೆ ಪಸರಿಸುತ್ತದೆ ಎಂದು ಹೇಳಿದರು.

ಕೇವಲ ಪುರುಷರೇ ತುಂಬಿರುವ ದೈವಶಾಸ್ತ್ರ ಸಂಪೂರ್ಣವಲ್ಲ ಎಂದು ಹೇಳಿದ ಪೋಪ್ ಫ್ರಾನ್ಸಿಸರು "ನಾವು ಬೈಬಲ್ ಶ್ರೀಗ್ರಂಥದಲ್ಲಿನ ಅರಸುಗಳ ಗ್ರಂಥದ ಹಲ್ಡಾ ಉದಾಹರಣೆಯಂತೆ ಮಹಿಳೆಯರನ್ನು ಒಳಗೊಂಡ ದೈವಶಾಸ್ತ್ರದ ಕುರಿತು ಚಿಂತಿಸಬೇಕು ಎಂದು ಹೇಳಿದರು. ಕೇವಲ ಮಹಿಳೆಯರು ಮಾತ್ರವೇ ಅರ್ಥಮಾಡಿಕೊಳ್ಳುವ ವಿಷಯಗಳಿವೆ. ಈ ನಿಟ್ಟಿನಲ್ಲಿ ದೈವಶಾಸ್ತ್ರಕ್ಕೆ ಅವರ ಕೊಡುಗೆಯ ಅವಶ್ಯಕತೆಯೂ ಇದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ದೈವಶಾಸ್ತ್ರ ಎಲ್ಲರಿಗೂ ದಕ್ಕುವಂತಹ ಹಾಗೂ ಎಲ್ಲರಿಗೂ ಪ್ರವೇಶಿಕೆ ಸಿಕ್ಕುವಂತಹದ್ದಾಗಬೇಕು" ಎಂದು ನುಡಿದರು.

09 December 2024, 16:40