ಹುಡುಕಿ

ವ್ಯಾಟಿಕನ್ ನ್ಯಾಯಾಧಿಕರಣದ ನಿರ್ಗಮಿತ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ ಪೋಪ್

ವ್ಯಾಟಿಕನ್ ನ್ಯಾಯಾಧೀಕರಣದ ಅಧ್ಯಕ್ಷರಾಗಿದ್ದ ಜಿಸೆಪ್ಪೆ ಪಿಗ್ನಟೋನೆ ಅವರು ಎಪ್ಪತ್ತೈದು ವರ್ಷಗಳನ್ನು ಪೂರೈಸಿದ ಹಿನ್ನೆಲೆ, ನಿಯಮದಂತೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಪಿಗ್ನಟೋನೆ ಅವರನ್ನು ಭೇಟಿ ಮಾಡಿ, ಅವರ ಸೇವೆಗೆ ಅಭಿನಂದನೆಗಳನ್ನು ಹಾಗೂ ಮುಂದಿನ ಜೀವನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ನ್ಯಾಯಾಧೀಕರಣದ ಅಧ್ಯಕ್ಷರಾಗುವುದಕ್ಕೂ ಮುಂಚಿತವಾಗಿ ಪಿಗ್ನಟೋನೆ ಅವರು ರೋಮ್ ನಗರದ ಪ್ರಾಸೆಕ್ಯೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಸುದೀರ್ಘ ಕಾನೂನು ಸೇವೆಯ ಹಿನ್ನೆಲೆಯನ್ನು ಹೊಂದಿದ್ದಾರೆ. ಮಂಗಳವಾರ ಮಧ್ಯಾಹ್ನ ಪೋಪ್ ಫ್ರಾನ್ಸಿಸ್ ಅವರು ಪಿಗ್ನಟೋನೆ ಅವರನ್ನು ಭೇಟಿ ಮಾಡಿದ್ದು, ಅವರ ಸೇವೆಗಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಪಿಗ್ನಟೋನೆ ಅವರ ಅವಧಿ ಡಿಸೆಂಬರ್ 31 ಕ್ಕೆ ಮುಕ್ತಾಯವಾಗಲಿದೆ.

ಕಳೆದ ಎರಡು ವರ್ಷಗಳಿಂದ ವ್ಯಾಟಿಕನ್ ನ್ಯಾಯಾಧೀಕರಣ ಅಧ್ಯಕ್ಷರಾಗಿ ಪಿಗ್ನಟೋನೆ ಅವರು ವ್ಯಾಟಿಕನ್ ಹಣಕಾಸು, ಸಿಸ್ಟೆನ್ ಚಾಪೆಲ್ ನವೀಕರಣದ ಕುರಿತ ಆರ್ಥಿಕ ವಿಷಯಗಳೂ ಸೇರಿದಂತೆ ವಿವಿಧ ರೀತಿಯ 83 ಪ್ರಕರಣಗಳನ್ನು ಅವರು ವಿಚಾರಣೆ ನಡೆಸುತ್ತಿದ್ದರು. ಪಲೇರ್ಮೋ ವಿಶ್ವವಿದ್ಯಾನಿಲಯದಿಂದ ಇವರು ಕಾನೂನು ಪದವಿಯನ್ನು ಪಡೆದಿದ್ದು, ನ್ಯಾಯಾಧೀಶರಾಗಿ ಹಾಗೂ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. 

11 December 2024, 17:00