ಮಾನವ ಹಕ್ಕುಗಳ ದಿನ ಪೋಪ್ ಫ್ರಾನ್ಸಿಸ್: ಯುದ್ಧ ಜನರನ್ನು ಅವರ ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸುತ್ತದೆ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಡಿಸೆಂಬರ್ 10 ರಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಯುದ್ಧದ ಕಾರಣದಿಂದ ಲಕ್ಷಾಂತರ ಜನರು ವಿವರಿಸಲಾಗದ ಬವಣೆಗಳನ್ನು ಅನುಭವಿಸುತ್ತಿದ್ದಾರೆ. ಯುದ್ಧಗಳು ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಆದುದರಿಂದ ಇವುಗಳನ್ನು ನಿಲ್ಲಿಸಬೇಕು ಎಂದು ವಿವಿಧ ದೇಶಗಳ ಸರ್ಕಾರಗಳಿಗೆ ಅವರು ಒತ್ತಾಯಿಸಿದ್ದಾರೆ.
ಯುದ್ಧದ ಕಾರಣದಿಂದ ವಿಶ್ವದಾದ್ಯಂತ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದು, ನಿರಾಶ್ರಿತರಾಗುತ್ತಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಯುದ್ಧದ ಬಲಿಪಶುಗಳಾಗುತ್ತಿದ್ದು ತಮ್ಮದಲ್ಲದ ತಪ್ಪಿಗೆ ನರಳುತ್ತಿದ್ದಾರೆ. ಯಾರದೋ ತಪ್ಪಿಗೆ ಮುಗ್ಧ ಜನರು ತಮ್ಮನ್ನೇ ಬಲಿಯಾಗಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಎಂಬುದು ಈ ಜಗತ್ತಿನಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ದಿನವಾಗಿದ್ದು, ಅಂತರಾಷ್ಟ್ರೀಯ ಸಮುದಾಯವು ಇದನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ.
ಯೂರೋಪಿಯನ್ ಧರ್ಮಸಭೆಯು ಯೂರೋಪ್ ಖಂಡದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿದೆ. ಪೋಪ್ ಫ್ರಾನ್ಸಿಸ್ ಅವರು ಈ ಕುರಿತು ಮಾತನಾಡಿದ್ದು, ಕ್ರೈಸ್ತರಾದ ನಮಗೆ ಇವುಗಳನ್ನು ತಡೆಗಟ್ಟುವ ನೈತಿಕ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ. ಈ ಹಿಂಸೆಯನ್ನು ನಿಲ್ಲಿಸಲು ಇಲ್ಲಿನ ಧರ್ಮಸಭೆಯ ಆಧ್ಯಾತ್ಮಿಕ ನಾಯಕರು ಮತ್ತಷ್ಟು ಶ್ರಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ್ದಾರೆ.