ಹುಡುಕಿ

ಸಿರಿಯಾ ದೇಶವನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಒಪ್ಪಿಸಿದ ಪೋಪ್ ಫ್ರಾನ್ಸಿಸ್

ಗ್ವಾಡಲೂಪೆ ಮಾತೆಯ ಮಹೋತ್ಸವದ ಹಿಂದಿನ ದಿನ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಸಿರಿಯಾ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಸನ್ನಿವೇಷಗಳ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು "ಎಲ್ಲರೂ ಜವಾಬ್ದಾರಿಯುತವಾಗಿ ಇಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು" ಎಂದು ಹೇಳಿದ್ದಾರೆ.

ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್

ಗ್ವಾಡಲೂಪೆ ಮಾತೆಯ ಮಹೋತ್ಸವದ ಹಿಂದಿನ ದಿನ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಸಿರಿಯಾ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಸನ್ನಿವೇಷಗಳ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು "ಎಲ್ಲರೂ ಜವಾಬ್ದಾರಿಯುತವಾಗಿ ಇಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು" ಎಂದು ಹೇಳಿದ್ದಾರೆ.

ಸಿರಿಯಾ ದೇಶದಲ್ಲಿ ಇದ್ದ ಅಸ್ಸಾದ್ ಸರ್ಕಾರ ಪತನವಾಗಿ ಅಲ್ಲಿ ಅಸ್ಥಿರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ತಮ್ಮ ಸಾರ್ವಜನಿಕ ಭೇಟಿಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಾನು ಪ್ರತಿ ದಿನ ಸಿರಿಯಾ ದೇಶದಲ್ಲಿ ಏನಾಗುತ್ತಿದೆ ಎಂಬುದರ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಎಲ್ಲಾ ರೀತಿಯ ಗೊಂದಲಗಳು ಸಿರಿಯಾ ದೇಶದಲ್ಲಿ ಬಗೆಹರಿಸು ಅಲ್ಲಿ ಮತ್ತೆ ಶಾಂತಿ ಮರುಕಳಿಸುವಂತಾಗಲಿ" ಎಂದು ಹೇಳಿದ್ದಾರೆ.

"ವಿದೇಶಗಳಿಂದ ಸಿರಿಯಾದ ಪ್ರಜೆಗಳು ತಾಯ್ನಾಡಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಅಸ್ಥಿರತೆ ಎಂಬುದು ಇಲ್ಲಿ ಮಾಯವಾಗಿ ಶಾಂತಿ ಮೂಡಲಿ. ಸರ್ಕಾರವೂ ಸೇರಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಎಲ್ಲರೂ ಶಾಂತಿಗಾಗಿ ಪ್ರಯತ್ನಿಸಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಸಿರಿಯಾ ದೇಶವನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದ್ದಾರೆ. "ಮಾತೆ ಮರಿಯಮ್ಮನವರ ಭಿನ್ನಹದ ಮೂಲಕ ಸಿರಿಯಾ ದೇಶದಲ್ಲಿ ಶಾಂತಿ ನೆಲೆಸಲಿ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಯುದ್ಧದಿಂದ ನರಳುತ್ತಿರುವ ಜನತೆಯನ್ನು ನೆನಪಿಸಿಕೊಂಡಿದ್ದು, ಅವರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ. ಇದೇ ರೀತಿ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಸಂಪೂರ್ಣವಾಗಿ ನಿಂತು, ಜಗದಲ್ಲಿ ಶಾಂತಿ ನೆಲೆಸಲಿ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

11 December 2024, 15:54