ಸರ್ಕಾರದ ಶಾಸನಗಳ ಆಧ್ಯತೆಯನ್ನು ಟೀಕಿಸಿದ ಶ್ರೀಲಂಕಾದ ಕಾರ್ಡಿನಲ್ ಮ್ಯಾಲ್ಕಂ
ಶ್ರೀಲಂಕಾದ ರಾಜಧಾನಿ ಕೊಲಂಬೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಮ್ಯಾಲ್ಕಂ ರಂಜಿತ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುವಾಗ ಶ್ರೀಲಂಕಾ ಸರ್ಕಾರದ ಶಾಸನಗಳ ಆಧ್ಯತೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಸರ್ಕಾರವು ಸಲಿಂಗ ವಿವಾಹ ಮಾನ್ಯತೆ ಹಾಗೂ ಹೆಣ್ಣು ಮಕ್ಕಳ ಹಕ್ಕುಗಳ ಕುರಿತ ಕಾನೂನುಗಳನ್ನು ಜಾರಿಗೆ ತರಲು ಚಿಂತಿಸಿರುವ ಹಿನ್ನೆಲೆಯಲ್ಲಿ ಕಾರ್ಡಿನಲ್ ರಂಜಿತ್ ಈ ಮಾತುಗಳನ್ನು ಆಡಿದ್ದಾರೆ.
ವರದಿ: ಲಿಕಾಸ್ ನ್ಯೂಸ್

ಈ ಮೇಲಿನ ಎರಡೂ ಕಾನೂನುಗಳನ್ನು ಟೀಕಿಸಿರುವ ಕಾರ್ಡಿನಲ್ ರಂಜಿತ್, ಈ ಕಾನೂನುಗಳು ಕುಟುಂಬಗಳ ಮೌಲ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ ಮಾತ್ರವಲ್ಲದೆ ಕುಟುಂಬ ಎಂಬ ಸಂಸ್ಥೆಯನ್ನು ಹಾಳುಮಾಡುತ್ತವೆ ಎಂದು ಹೇಳಿದ್ದಾರೆ.
ಕಾರ್ಡಿನಲ್ ರಂಜಿತ್ ಅವರು ಕುಟುಂಬ, ವಿವಾಹ ಹಾಗೂ ಇನ್ನಿತರ ಮೌಲ್ಯಗಳ ಕುರಿತು ಧರ್ಮಸಭೆಯ ಅಭಿಪ್ರಾಯ ಹಾಗೂ ಸಿದ್ಧಾಂತಗಳ ಕುರಿತು ಮಾತನಾಡಿದರು.
01 ಆಗಸ್ಟ್ 2024, 15:32