ಸಿನೋಡ್: ಕಾರ್ಡಿನಲ್ ಗ್ರೆಕ್ ಅವರ ಪವಿತ್ರಾತ್ಮರ ಬಲಿಪೂಜೆಯ ಮುಖ್ಯಾಂಶಗಳು
ವರದಿ: ವ್ಯಾಟಿಕನ್ ನ್ಯೂಸ್
ಸಿನೋಡ್ ಸಮಾವೇಶದ ಪ್ರಧಾನ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಇಂದು ಸಿನೋಡ್ ಸಮಾಲೋಚನೆಗೂ ಮುಂಚಿತವಾಗಿ ಪವಿತ್ರಾತ್ಮರ ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ಈ ವೇಳೆ ಅವರು ಪ್ರಬೋಧನೆಯನ್ನು ನೀಡುತ್ತಾ, ಪ್ರೀತಿಯ ಸಹೋದರ ಸಹೋದರಿಯರೇ, ಅಕ್ಟೋಬರ್ 2021 ರಂದು ನಾವು ಆರಂಭಿಸಿದ ಸಿನೋಡ್ ಸಮಾವೇಶದ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಇಂದಿನ ಶುಭ ಸಂದೇಶವು ನಮ್ಮ ಆಕ್ರಮಣಕಾರಿ ಮನಸ್ಥಿತಿಯಿಂದ ನಾವು ಹೊರಬಂದು, ಒಟ್ಟಾಗಿ ಸೇರಿ ಪ್ರಭುವಿನ ಸಂದೇಶವನ್ನು ಸಾರಬೇಕು ಎಂಬ ಸಂದೇಶವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, "ಇಂದು ನಾವು ಪವಿತ್ರಾತ್ಮರ ಬಲಿಪೂಜೆಯನ್ನು ಆಚರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಪ್ರಭುವಿನ ಹೊಸತನಕ್ಕೆ ನಮ್ಮನ್ನೇ ನಾವು ತೆರೆದುಕೊಳ್ಳಲು ಪವಿತ್ರಾತ್ಮರು ನಮಗೆ ನೆರವಾಗುತ್ತಾರೆ. ಈ ಸಿನೋಡ್ ಸಮಾವೇಶ ಎಂಬುದು ಒಂದು ಸಂಸತ್ತು ಅಥವಾ ಅಭಿಪ್ರಾಯ ಸಂಗ್ರಹಿಸುವ ತಾಣವಲ್ಲ. ಬದಲಿಗೆ ಇದು ಪಯಣಿಸುವ ಧರ್ಮಸಭೆಯ ಆತ್ಮವಾಗಿದ್ದು, ಈ ಆತ್ಮದ ರೂವಾರಿ ಪವಿತ್ರಾತ್ಮರಾಗಿದ್ದಾರೆ ಎಂದು ಹೇಳಿದರು.
ಅಂತಿಮವಾಗಿ ಕಾರ್ಡಿನಲ್ ಗ್ರೆಕ್ ಅವರು "ಪ್ರಿಯ ಸಹೋದರ ಸಹೋದರಿಯರೇ, ಆರಂಭದಲ್ಲೇ ನಾವು ಸಿನೋಡ್ ಸಮಾವೇಷವನ್ನು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದ್ದೇವೆ, ಅವರ ಭಿನ್ನಹಗಳ ಮೂಲಕ ಮುಂದಿನ ಹಾದಿಯನ್ನು ಕ್ರಮಿಸೋಣ" ಎಂದು ಹೇಳಿದರು.