ಹುಡುಕಿ

ವಿಶ್ವಸಂಸ್ಥೆಯ ಶಾಂತಿಪಾಲಕ ಪಡೆಗಳು ಬೇಕು ಎಂಬ ಹೈಟಿಯ ಮನವಿಗೆ ಪವಿತ್ರ ಪೀಠ

ಹೈಟಿ ದೇಶದಲ್ಲಿ 2018 ರಿಂದ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿದ್ದು, ಅರಾಜಕತೆ ತಾಂಡವವಾಡುತ್ತಿದೆ. ಇಲ್ಲಿನ ತಾತ್ಕಾಲಿಕ ಸರ್ಕಾರವು ದೇಶದಲ್ಲಿ ನಡೆಯುತ್ತಿರುವ ಗ್ಯಾಂಗ್ ವಾರ್, ಭಯೋತ್ಪಾದನೆ ಹಾಗೂ ಮುಂತಾದ ಕ್ರಿಮಿನಲ್ ಚಟುವಟಿಕೆಗಳನ್ನು ಹತ್ತಿಕ್ಕಲು ವಿಫಲವಾಗಿದ್ದು, ವಿಶ್ವಸಂಸ್ಥೆಯ ಶಾಂತಿ ಪಾಲಕ ಪಡೆಗಳು ಇಲ್ಲಿಗೆ ಬಂದು ಸಹಾಯವನ್ನು ನೀಡಬೇಕು ಎಂದು ಹೇಳಿದೆ. ಹೈಟಿ ದೇಶದ ಈ ಮನವಿಗೆ ವ್ಯಾಟಿಕನ್ ಸ್ಪಂದಿಸಿದ್ದು, ಅದಕ್ಕೆ ಬೆಂಬಲವಾಗಿ ನಿಂತಿದೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ನಿನ ಶಾಶ್ವತ ವೀಕ್ಷಕರಾಗಿರುವ ಮೊನ್ಸಿಜ್ಞೊರ್ ಕ್ರುಝ್ ಅವರು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗಳು ಹೈಟಿ ದೇಶದಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಹಾಗೂ ಅಲ್ಲಿ ಒಂದು ರೀತಿಯ ಆರ್ಡರ್ ಅನ್ನು ಮರುಸ್ಥಾಪಿಸಲು ಇಲ್ಲಿಗೆ ಆಗಮಿಸಬೇಕಿದೆ. ಅದೇ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯವು ಹೈಟಿ ದೇಶದಲ್ಲಿ ಶಾಂತಿಯನ್ನು ರೂಪಿಸಲು ಬದ್ಧತೆಯನ್ನು ತೋರಿಸಬೇಕಿದೆ ಎಂದು ಹೇಳಿದ್ದಾರೆ.

ಹೈಟಿ ದೇಶಕ್ಕೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳು ಆಗಮಿಸಿ, ಇಲ್ಲಿನ ಅವ್ಯವಸ್ಥೆಯನ್ನು ಹಾಗೂ ಗುಂಪು ಘರ್ಷಣೆಯನ್ನು ಹತೋಟಿಯಲ್ಲಿಟ್ಟಿದ್ದವು. ಈವರೆಗೂ ಈ ದೇಶದಲ್ಲಿ ನಡೆಯುತ್ತಿರುವ ಅರಾಜಕತೆಯಿಂದ ಸುಮಾರು ಏಳು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಸಾವಿರಾರು ಜನರು ಈ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ.

ಹೈಟಿ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ವ್ಯಾಟಿಕನ್ನಿನ ಪವಿತ್ರ ಪೀಠವು ಬದ್ಧತೆಯನ್ನು ಹೊಂದಿದೆ ಹಾಗೂ ಸದಾ ಅದಕ್ಕಾಗಿ ಬೆಂಬಲವನ್ನು ನೀಡುತ್ತದೆ ಎಂದು ವರದಿಯಾಗಿದೆ.  

14 November 2024, 16:00