ಹುಡುಕಿ

ವಿಶ್ವ ಮೀನುಗಾರಿಕೆ ದಿನ: ಕ್ರೈಸ್ತರು ಇದನ್ನು ನಿರ್ಲಕ್ಷಿಸಲಾಗುವುದಿಲ್ಲ

ಮೀನುಗಾರಿಕೆ ಕ್ಷೇತ್ರದಲ್ಲಿ ವಿಶ್ವದಲ್ಲಿ ಸುಮಾರು 58 ಮಿಲಿಯನ್ ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿರುವ ಕಾರ್ಡಿನಲ್ ಮೈಕಲ್ ಸಿಜೆರ್ನಿ ಅವರು ವಿಶ್ವ ಮೀನುಗಾರಿಕೆ ದಿನಕ್ಕೆ ಸಂದೇಶವನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪರಿಸರವನ್ನು ಹಾಳು ಮಾಡುವ ಅಪಾಯಕಾರಿ ಆರ್ಥಿಕ ಮಾದರಿಯ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮೀನುಗಾರಿಕೆ ಕ್ಷೇತ್ರದಲ್ಲಿ ವಿಶ್ವದಲ್ಲಿ ಸುಮಾರು 58 ಮಿಲಿಯನ್ ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿರುವ ಕಾರ್ಡಿನಲ್ ಮೈಕಲ್ ಸಿಜೆರ್ನಿ ಅವರು ವಿಶ್ವ ಮೀನುಗಾರಿಕೆ ದಿನಕ್ಕೆ ಸಂದೇಶವನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪರಿಸರವನ್ನು ಹಾಳು ಮಾಡುವ ಅಪಾಯಕಾರಿ ಆರ್ಥಿಕ ಮಾದರಿಯ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರತಿ ವರ್ಷ ವಿಶ್ವಸಂಸ್ಥೆಯು ನವೆಂಬರ್ 21ರಂದು ವಿಶ್ವ ಮೀನುಗಾರಿಕೆ ದಿನವನ್ನು ಆಚರಿಸುತ್ತದೆ. ಇದರ ಉದ್ದೇಶ ಸುಸ್ಥಿರ ಮೀನುಗಾರಿಕೆಯನ್ನು ವಿಶ್ವದಾದ್ಯಂತ ಹೊಂದುವುದು ಹಾಗೂ ಮೀನುಗಾರಿಕೆಯ ನಿಟ್ಟಿನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಿ, ಅದನ್ನು ನಿಯಂತ್ರಿಸುವುದಾಗಿದೆ. ಮುಂದುವರೆದು ಸಣ್ಣ ಪ್ರಮಾಣದ ಮೀನುಗಾರಿಕೆ ಸಮುದಾಯಗಳ ಮಾನವ ಹಕ್ಕುಗಳನ್ನು ಪ್ರತಿಪಾದಿಸುವುದಾಗಿದೆ.

ಮಂಗಳವಾರ ನವೆಂಬರ್ 12ರಂದು ವ್ಯಾಟಿಕನ್ನಿನ ಸಮಗ್ರ ಮಾನದ ಅಭಿವೃದ್ಧಿ ಆಯೋಗದ ಉಸ್ತುವಾರಿಯಾದ ಕಾರ್ಡಿನಲ್ ಮೈಕಲ್ ಸಿಜರ್ನಿ ಅವರು ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ಮೀನುಗಾರಿಕೆ ಎಂಬುದು ಪ್ರಪಂಚದ ಅತ್ಯಂತ ಹಳೆಯ ಜೀವನೋಪಾಯವಾಗಿದ್ದು, ಇದು ಜಗತ್ತಿನ ಹಲವು ಭಾಗಗಳನ್ನು ಬದಲಾಯಿಸಿದೆ. ಯಾವುದೇ ನಿಯಂತ್ರಣವಿಲ್ಲದೆ ಸ್ವಾರ್ಥಕ್ಕಾಗಿ ಮೀನುಗಾರಿಕೆಯನ್ನು ಮಾಡುವುದು ಪರಿಸರದ ಮೇಲೆ ವ್ಯತರಿಕ್ತ ಪರಿಣಾಮವನ್ನು ಬೀರುತ್ತದೆ. ಪರಿಸರದ ಸಮತೋಲನ ಹಾಳಾಗುತ್ತದೆ. ಇದರಿಂದ ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ಸಮುದಾಯಗಳು ನೆಲೆಯನ್ನು ಕಳೆದುಕೊಳ್ಳುತ್ತವೆ ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಕಾರ್ಡಿನಲ್ ಅವರು ವಿಶ್ವಗುರು ಫ್ರಾನ್ಸಿಸ್ ಅವರ ಕುರಿತು ಪ್ರಸ್ತಾಪಿಸಿದರು. ವಿಶ್ವಗುರು ಫ್ರಾನ್ಸಿಸ್ ಅವರು ನಮ್ಮ ಸಾಮಾನ್ಯ ಮನೆಯಾದ ಈ ಭೂಮಿಯ ಕುರಿತು ಅತ್ಯಂತ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ. ಆದುದರಿಂದ ಅವರು ಭೂಮಿಯ ಕುರಿತು ಪ್ರೇಷಿತ ಪುಸ್ತಕವನ್ನು ಪ್ರಕಟಿಸಿದ್ದಾರೆ. ಪರಿಸರದ ಕುರಿತ ಎಲ್ಲಾ ಕಾರ್ಯಗಳನ್ನು ಬಹಳ ಜತನದಿಂದ ಕೈಗೊಳ್ಳುವ ಅವರು ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.

12 November 2024, 17:27