ಹುಡುಕಿ

ಕೆನಡಾದ ನೂತನ ಕಾರ್ಡಿನಲ್: ಧರ್ಮಸಭೆಯ ಸೇವಾಕಾರ್ಯ ಮಾನವ ಹೃದಯದಿಂದ ಆರಂಭವಾಗಬೇಕು

ಕೆನಡಾದ ಟೊರೊಂಟೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಫ್ರಾಂಕ್ ಲಿಯೋ ಅವರ ಜೊತೆಗೆ ವ್ಯಾಟಿಕನ್ ನ್ಯೂಸ್ ಸುದ್ದಿತಾಣವು ಮಾತನಾಡಿದ್ದು, ಅವರು ಧರ್ಮಸಭೆಯ ಸೇವಾಕಾರ್ಯ ಮಾನವ ಹೃದಯದಿಂದ ಆರಂಭವಾಗಬೇಕು ಎಂದು ಹೇಳಿದ್ದಾರೆ. "ನಮಗೆ ಆಧ್ಯಾತ್ಮಿಕ ಅನುಭೂತಿ ಆಗಬೇಕು. ದೇವರ ಹೊಸತನವನ್ನು ನಾವು ಈ ಜಗತ್ತಿಗೆ ತರಬೇಕು" ಎಂದು ಅವರು ಹೇಳಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಕೆನಡಾದ ಟೊರೊಂಟೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಫ್ರಾಂಕ್ ಲಿಯೋ ಅವರ ಜೊತೆಗೆ ವ್ಯಾಟಿಕನ್ ನ್ಯೂಸ್ ಸುದ್ದಿತಾಣವು ಮಾತನಾಡಿದ್ದು, ಅವರು ಧರ್ಮಸಭೆಯ ಸೇವಾಕಾರ್ಯ ಮಾನವ ಹೃದಯದಿಂದ ಆರಂಭವಾಗಬೇಕು ಎಂದು ಹೇಳಿದ್ದಾರೆ. "ನಮಗೆ ಆಧ್ಯಾತ್ಮಿಕ ಅನುಭೂತಿ ಆಗಬೇಕು. ದೇವರ ಹೊಸತನವನ್ನು ನಾವು ಈ ಜಗತ್ತಿಗೆ ತರಬೇಕು" ಎಂದು ಅವರು ಹೇಳಿದ್ದಾರೆ. 

ಇಂದು 21 ಧರ್ಮಾಧ್ಯಕ್ಷರುಗಳನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ಕಾರ್ಡಿನಲ್ಲುಗಳಾಗಿ ಅಭ್ಯಂಗಿಸಲಿದ್ದಾರೆ. ಕೆನಡಾದ ಟೊರೊಂಟೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಫ್ರಾನ್ಸಿಸ್ ಲಿಯೋ ಅವರು ನೂತನ ಕಾರ್ಡಿನಲ್ ಆಗಿ ಅಭ್ಯಂಗಿತರಾಗುವ ಮೂಲಕ ಕಾಲೇಜ್ ಆಫ್ ಕಾರ್ಡಿನಲ್ಸ್ (ಕಾರ್ಡಿನಲ್ಲುಗಳ ಪರಿಷತ್ತಿನ) ಅತ್ಯಂತ ಚಿಕ್ಕ ವಯಸ್ಸಿನ ಸದಸ್ಯರಾಗಲಿದ್ದಾರೆ.

ಈ ಕುರಿತು ವ್ಯಾಟಿಕನ್ ನ್ಯೂಸ್ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು "ಪವಿತ್ರ ತಂದೆಯಾದ ಪೋಪ್ ಫ್ರಾನ್ಸಿಸ್ ಅವರಿಗೆ ಈ ಮೂಲಕ ಹೊಸ ಹಾದಿಯಲ್ಲಿ ಹಾಗೂ ಹೊಸ ರೀತಿಯಲ್ಲಿ ಸೇವೆ ಸಲ್ಲಿಸಲು ಇದು ಸದಾವಕಾಶ" ಎಂದು ಹೇಳಿದ್ದಾರೆ.

ಧರ್ಮಸಭೆ ಪ್ರಸ್ತುತ ಕಾಲಘಟ್ಟದಲ್ಲಿ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾವುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು "ಜಾತ್ಯಾತೀತತೆ ಹಾಗೂ ರಾಜಕೀಯ ಧೃವೀಕರಣ ಎಂಬುದು ಇಂದು ಧರ್ಮಸಭೆಗೆ ದೊಡ್ಡ ಸಮಸ್ಯೆಗಾಗಿದೆ" ಎಂದು ಹೇಳಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ನಾವು ಮಾನವ ಹೃದಯದಿಂದ ಆರಂಭಿಸಬೇಕು ಎಂದು ಹೇಳಿರುವ ಅವರು "ನಾವು ನಮ್ಮ ಹೃದಯಗಳಲ್ಲಿ ದೇವರೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಬೇಕು. ಇದು ಅತ್ಯಂತ ಮುಖ್ಯವಾಗಿದೆ" ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿರುವ ನೂತನ ಕಾರ್ಡಿನಲ್ ಫ್ರಾನ್ಸಿಸ್ ಲಿಯೋ ಅವರು "ಧರ್ಮಸಭೆ ಹಾಗೂ ಸ್ಥಳೀಯ ಬುಡಕಟ್ಟುಗಳ ನಡುವೆ ಸಂಧಾನ ಹಾಗೂ ಸಾಮರಸ್ಯ ಇನ್ನೂ ಹೆಚ್ಚಿನ ರೀತಿಯಲ್ಲಿ ಮೂಡಬೇಕು. ಆ ಮೂಲಕ ಧರ್ಮಸಭೆ ಎಲ್ಲರನ್ನೂ ಒಳಗೊಂಡು ಮುನ್ನಡೆಯಬೇಕು" ಎಂದು ಅವರು ಹೇಳಿದರು.    

07 December 2024, 16:25