ಸಿರಿಯಾದ ಜನತೆಯ ಭವಿಷ್ಯದ ಕುರಿತು ಭರವಸೆ ವ್ಯಕ್ತಪಡಿಸಿದ ಕಾರ್ಡಿನಲ್ ಪರೋಲಿನ್
ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್
ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಸದ್ಯ ಇಟಲಿಯ ಮಿಲಾನ್ ನಗರಕ್ಕೆ ಭೇಟಿ ನೀಡಿದ್ದು, ಅಲ್ಲಿ ಅವರು ಇಸ್ಲಾಮಿಕ್ ಸಂಸ್ಥೆಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು ಸಿರಿಯಾದಲ್ಲಿನ ಪ್ರಸ್ತುತ ನಡೆಯುತ್ತಿರುವ ಸನ್ನಿವೇಷಗಳ ಕುರಿತು ಮಾತನಾಡಿ, ಸಿರಿಯಾದ ಜನತೆಗೆ ಹಾಗೂ ಅವರ ಭವಿಷ್ಯದ ಕುರಿತು ನನಗೆ ಇನ್ನೂ ಭರವಸೆ ಇದೆ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಸಿರಿಯಾದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಯಾರಿಗೂ ಸ್ಪಷ್ಟ ಮಾಹಿತಿಯಿಲ್ಲ. ಇಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಆದರೂ ಸಹ ಸಿರಿಯಾ ದೇಶದಲ್ಲಿ ಶಾಂತಿ ಮೂಡಿಸಲು ಎಲ್ಲಾ ಪಕ್ಷಗಳು ಕಾರ್ಯನಿರ್ವಹಿಸಬೇಕು. ಇಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕಬೇಕು. ಸಿರಿಯಾ ದೇಶಕ್ಕೆ ಭವಿಷ್ಯವಿದೆ ಎಂದು ನಾನು ನಂಬುತ್ತೇನೆ ಎಂದು ಕಾರ್ಡಿನಲ್ ಪರೋಲಿನಿ ಅವರು ಹೇಳಿದ್ದಾರೆ.
ಸಂವಾದದ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಕಾರ್ಡಿನಲ್ ಪರೋಲಿನಿ ಅವರು "ಯಾವುದೇ ಸಮಸ್ಯೆಗ ಯುದ್ಧ ಅಥವಾ ಹಿಂಸೆ ಪರಿಹಾರವಲ್ಲ. ಸಮಸ್ಯೆಗಳನ್ನು ಹಾಗೂ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಸಂವಾದಿಸಬೇಕು ಹಾಗೂ ಸಂಭಾಷಿಸಬೇಕು" ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ಸಮಸ್ಯೆಗಳನ್ನು ಸಂವಾದದ ಮೂಲಕ ಬಗೆಹರಿಸಬೇಕೆ ವಿನಃ ಶಸ್ತ್ರಾಸ್ತ್ರಗಳಿಂದಲ್ಲಲಎಂದು ಹೇಳಿದರು. ವಿಶ್ವದಲ್ಲಿ ಯಾವುದೇ ಬದಲಾವಣೆ ಆಗಬೇಕೆಂದರೆ ಅದು ಸಂವಾದದ ಮೂಲಕವೇ ಆಗಬೇಕು ಎಂದು ಅವರು ಹೇಳಿದರು.