ನಿಕರಾಗುವಾ ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್

ಇಂದು ಅಮಲೋದ್ಭವಿ ಮಾತೆಯ ಮಹೋತ್ಸವದ ಹಿನ್ನೆಲೆ ಇಂದು ನೂತನ ಕಾರ್ಡಿನಲ್ಲುಗಳ ಜೊತೆಗೂಡಿ ವ್ಯಾಟಿಕನ್ನಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು ನಿಕರಾಗುವ ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ನಾಗರೀಕ ಯುದ್ಧದ ಕುರಿತು ಮಾತನಾಡಿ, ಅಲ್ಲಿ ಶಾಂತಿ ಹಾಗೂ ಸೋದರತ್ವ ನೆಲೆಸಲಿ ಎಂದು ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಭಕ್ತಾಧಿಗಳಿಗೆ ಹೇಳಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಇಂದು ಅಮಲೋದ್ಭವಿ ಮಾತೆಯ ಮಹೋತ್ಸವದ ಹಿನ್ನೆಲೆ ಇಂದು ನೂತನ ಕಾರ್ಡಿನಲ್ಲುಗಳ ಜೊತೆಗೂಡಿ ವ್ಯಾಟಿಕನ್ನಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್ ಅವರು ನಿಕರಾಗುವ ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ನಾಗರೀಕ ಯುದ್ಧದ ಕುರಿತು ಮಾತನಾಡಿ, ಅಲ್ಲಿ ಶಾಂತಿ ಹಾಗೂ ಸೋದರತ್ವ ನೆಲೆಸಲಿ ಎಂದು ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಭಕ್ತಾಧಿಗಳಿಗೆ ಹೇಳಿದ್ದಾರೆ.

ಅಮಲೋದ್ಭವಿ ಮಾತೆಯು ನಿಕರಾಗುವ ದೇಶದ ಪಾಲಕಿಯಾಗಿರುವ ಹಿನ್ನೆಲೆ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಅಮಲೋಧ್ಭವಿ ಮಾತೆಯ ಭಿನ್ನಹ ಹಾಗೂ ಮಧ್ಯಸ್ಥಿಕೆಯ ಮೂಲಕ ಈ ದೇಶದಲ್ಲಿ ಶಾಂತಿ ನೆಲೆಸಲಿ. ಇಲ್ಲಿನ ಜನತೆ ಸಹೋದರ-ಸಹೋದರಿಯರಾಗಿ ನೆಮ್ಮದಿಯಿಂದ ಜೀವಿಸುವಂತಾಗಲಿ" ಎಂದು ಹೇಳಿದ್ದಾರೆ. ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಹಾಗೂ ವ್ಯಕ್ತಿಗಳು ಸಂವಾದಿಸಿ, ಆ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿ ಎಂದು ಪೋಪ್ ಫ್ರಾನ್ಸಿಸ್ ಅವರು ನುಡಿದಿದ್ದಾರೆ.

ಇಂದಿನ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿಯೂ ಸಹ ಪೋಪ್ ಫ್ರಾನ್ಸಿಸ್ ಅವರು ನಿಕರಾಗುವ ದೇಶದ ಜನತೆಯ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆ ದೇಶದಲ್ಲಿನ ಪ್ರಸ್ತುತ ಸಮಸ್ಯೆಗಳು ಹೆಚ್ಚಿನ ದುರಂತಕ್ಕೆ ಎಡೆಮಾಡದಿರಲಿ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಮಾತೆ ಮರಿಯಮ್ಮನವರು ಇಲ್ಲಿನ ನಾಯಕರು ಹಾಗೂ ಜನತೆಯ ಹೃದಯಗಳನ್ನು ತೆರೆದು, ಸೂಕ್ತ ಸಂವಾದದ ಮೂಲಕ ಇಲ್ಲಿ ಶಾಂತಿ, ಸೋದರತೆ ಹಾಗೂ ಐಕಮತ್ಯವನ್ನು ಮೂಡಿಸಲು ನೆರವಾಗಲಿ ಎಂದು ಪೋಪ್ ಫ್ರಾನ್ಸಿಸ್ ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ನಿಕರಾಗುವಾ ದೇಶದ ಒರ್ಟೇಗಾ ಸರ್ಕಾರವು ಧರ್ಮಸಭೆಯೂ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿತ್ತು ಮಾತ್ರವಲ್ಲದೆ, ಅನೇಕ ಕಥೋಲಿಕ ಗುರುಗಳನ್ನು ಬಲವಂತದಿಂದ ಗಡಿಪಾರು ಮಾಡಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

08 December 2024, 16:21