ಹುಡುಕಿ

ಸಿಸ್ಟರ್ ಸ್ಮೆರಿಲ್ಲಿ: ಬದಲಾಗುತ್ತಿರುವ ಜಗತ್ತಿನಲ್ಲಿ ಸಿನೋಡಾಲಿಟಿ ಧರ್ಮಸಭೆಯ ಸುವಾರ್ತಾ ಪ್ರಸಾರದ ಕೀಲಿಕೈ ಆಗಿದೆ

ಭಾರತದ ನವ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠದ ಕಾರ್ಯದರ್ಶಿಯಾಗಿರುವ ಸಿಸ್ಟರ್ ಅಲೆಸಾಂದ್ರ ಸ್ಮೆರಿಲ್ಲಿ ಅವರು ಸಿನೊಡಾಲಿಟಿಯನ್ನು ಕಥೋಲಿಕ ಧರ್ಮಸಭೆ ಬದುಕಿನ ರೀತಿಯಾಗಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ವರದಿ: ಲಿಕಾಸ್ ನ್ಯೂಸ್

ಭಾರತದ ನವ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವ್ಯಾಟಿಕನ್ನಿನ ಸಮಗ್ರ ಮಾನವ ಅಭಿವೃದ್ಧಿ ಪೀಠದ ಕಾರ್ಯದರ್ಶಿಯಾಗಿರುವ ಸಿಸ್ಟರ್ ಅಲೆಸಾಂದ್ರ ಸ್ಮೆರಿಲ್ಲಿ ಅವರು ಸಿನೊಡಾಲಿಟಿಯನ್ನು ಕಥೋಲಿಕ ಧರ್ಮಸಭೆ ಬದುಕಿನ ರೀತಿಯಾಗಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.  

ದೆಹಲಿಯ ಮಹಾಧರ್ಮಾಧ್ಯಕ್ಷರ ನಿವಾಸದಲ್ಲಿ ಮಾತನಾಡಿದ ಸಿಸ್ಟರ್ ಅಲೆಸಾಂದ್ರ ಸ್ಮೆರಿಲ್ಲಿ ಅವರು ಸಿನೊಡಾಲಿಟಿ ಬದಲಾಗುತ್ತಿರುವ ಜಗತ್ತಿನಲ್ಲಿ ಧರ್ಮಸಭೆಯ ಸುವಾರ್ತಾ ಪ್ರಸಾರದ ಕೀಲಿಕೈ ಆಗಿದೆ ಎಂದು ಹೇಳಿದರು.

ಸಿಸ್ಟರ್ ಅಲೆಸಾಂದ್ರ ಸ್ಮೆರಿಲ್ಲಿ ಅವರು ತಮ್ಮ ಮಾತಿನಲ್ಲಿ ಪೋಪ್ ಫ್ರಾನ್ಸಿಸ್ ಅವರ ಸಹಭಾಗಿತ್ವ, ಪಾಲ್ಗೊಳ್ಳುವಿಕೆ ಹಾಗೂ ಸೇವಾಕಾರ್ಯದ ಧರ್ಮಸಭೆಯ ಕುರಿತು ಮಾತನಾಡಿದರು ಎಂದು ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಕಾರ್ಯದರ್ಶಿ ಕಚೇರಿಯು ಲಿಕಾಸ್ ನ್ಯೂಸ್ ಸುದ್ದಿತಾಣಕ್ಕೆ ವರದಿ ಮಾಡಿದೆ.

"ಸಿನೋಡಾಲಿಟಿಯನ್ನು ಕೇವಲ ಒಂದು ವಿಧವಾಗಿ ಮಾತ್ರವಲ್ಲದೆ, ಬದುಕಿನ ಹಾದಿಯಾಗಿ ಹಾಗೂ ರೀತಿಯಾಗಿ ಧರ್ಮಸಭೆಯು ಆಳವಡಿಸಿಕೊಳ್ಳಬೇಕು" ಎಂದು ಸಿಸ್ಟರ್ ಸ್ಮೆರಿಲ್ಲಿ ಅವರು ಹೇಳಿದರು.

ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿರುವ ದೆಹಲಿಯ ಮಹಾಧರ್ಮಾಧ್ಯಕ್ಷ ಅನಿಲ್ ಜೋಸೆಫ್ ಕೂಟೋ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. "ವಿಶ್ವಾಸದ ನವೀಕೃತ ಪಯಣವನ್ನು ಸಿನೊಡಾಲಿಟಿ ಎಂಬುದು ಆರಂಭಿಸುತ್ತದೆ" ಎಂದು ಅವರು ಹೇಳಿದರು.

ಸಿಸಿಬಿಐ ಸಹ ಉಪ ಪ್ರಧಾನ ಕಾರ್ಯದರ್ಶಿಯಾಗಿರುವ ಫಾದರ್ ಕ್ರಿಸ್ಟೊಫರ್ ವಿಮಲ್ ರಾಜ್ ಅವರು ಸಿಸಿಬಿಐ ಪಾಲನಾ ಯೋಜನೆ - ಮಿಷನ್ 2033 ಅನ್ನು ಪ್ರಸ್ತುತಪಡಿಸಿದರು. ಹೇಗೆ ಈ ವಿಧಾನ ಜಗತ್ತಿನಲ್ಲಿ ಧರ್ಮಸಭೆಯ ಪಾತ್ರವನ್ನು ಉನ್ನತೀಕರಿಸುತ್ತದೆ ಎಂಬುದರ ಕುರಿತು ಇದರಲ್ಲಿ ಭಾಗವಹಿಸಿದ ಸದಸ್ಯರು ಅವಲೋಕಿಸಿದರು.   

02 December 2024, 13:45