ಹುಡುಕಿ

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ  (AFP or licensors)

ಯುನಿಸೆಫ್: ಗಾಜಾದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಿಶುಗಳು ಜಗತ್ತಿನ ಕಣ್ಣಮುಂದೆಯೇ ನಶಿಸಿಹೋಗುತ್ತಿವೆ

ಗಾಜಾದಲ್ಲಿ ಐದು ವರ್ಷದ ಕೆಳಗಿನವರಲ್ಲಿ ಆರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಕ್ರಮೇಣ ಅಸುನೀಗುತ್ತಿದ್ದಾರೆ ಎಂದು ಮಾನವೀಯ ಕಾರ್ಯಗಳ ಸಂಸ್ಥೆ ಯುನಿಸೆಫ್ ವರದಿ ಮಾಡಿದೆ.

ವರದಿ: ವ್ಯಾಟಿಕನ್ ವರದಿ

ಗಾಜಾದಲ್ಲಿ ಉದ್ಭವಿಸುತ್ತಿರುವ ಮಕ್ಕಳ ಕುರಿತ ಗಂಭೀರ ಕಳವಳವನ್ನು ವ್ಯಕ್ತಪಡಿಸಿರುವ ಯುನಿಸೆಫ್ ಸಂಸ್ಥೆಯು, ಈ ಕುರಿತು ಜಗತ್ತಿಗೆ ಅಪಾಯಕಾರಿ ಮುನ್ಸೂಚನೆಯನ್ನು ನೀಡಿದೆ. 

"ನಾವು ಭಯಪಟ್ಟಂತೆ ಮಕ್ಕಳ ಸಾವುಗಳು ಸಂಭವಿಸುತ್ತಿವೆ; ಇದು ಅಪೌಷ್ಟಿಕತೆಯ ಮೂಲಕ ಆಗುತ್ತಿದೆ." ಎಂದು ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದ ಪ್ರಾದೇಶಿಕ ನಿರ್ದೇಶಕ ಅಡಿಲೆ ಕೋದಿರ್ ಅವರು ಹೇಳಿದ್ದಾರೆ.   

"ನಿರ್ಜಲೀಕರಣ ಹಾಗೂ ಅಪೌಷ್ಟಿಕತೆಯಿಂದ ಕನಿಷ್ಟ ಹತ್ತು ಮಕ್ಕಳು ಅದ್ವಾನ್ ಆಸ್ಪತ್ರೆಯಲ್ಲಿ ಮೃತ ಹೊಂದಿದ್ದಾರೆ." ಎಂದು ವರದಿ ಮಾಡಿದೆ. ಅದಲ್ಲದೆ, ಇನ್ನೂ ಹಲವು ಮಕ್ಕಳು ಇದರಿಂದ ಭಾಧಿತರಾಗಿರುವ ಸಂಭವವಿದೆ ಎಂದು ಯುನಿಸೆಫ್ ವರದಿ ಮಾಡಿದೆ. ಉತ್ತರ ಗಾಜಾದಲ್ಲಿರುವ ಮಕ್ಕಳಿಗೆ ಈಗಲೂ ಸಹ ನೆರವು ನೀಡಲು ಸಾಧ್ಯವಾಗುತ್ತಿಲ್ಲ. 

ಯುನಿಸೆಫ್ ಪತ್ರಿಕಾ ಹೇಳಿಕೆಯಲ್ಲಿ ಯುದ್ಧಗ್ರಸ್ಥ ಪ್ರದೇಶಗಳಲ್ಲಿರುವ ಮಕ್ಕಳಿಗೆ ಸ್ವಚ್ಛ ನೀರು, ಪೌಷ್ಟಿಕಾಂಶಯುಕ್ತ ಆಹಾರ, ಹಾಗೂ ಔಷಧಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.     

05 March 2024, 15:00