ಗಾಜಾದಲ್ಲಿ ಕದನ ವಿರಾಮ ಸ್ಥಾಪಿಸಲು ಪ್ರಯತ್ನಗಳು ಮುಂದುವರೆದಿವೆ

ಗಾಜಾದಲ್ಲಿ ಕದನ ವಿರಾಮ ಸ್ಥಾಪಿಸಲು ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಹಾಗೂ ಅಮೇರಿಕಾ ಅಧ್ಯಕ್ಷ ಜೋಸೆಫ್ ಬೈಡೆನ್ ಅವರು ಮತ್ತೊಮ್ಮೆ ಮಾತುಕತೆಯನ್ನು ನಡೆಸಿದ್ದಾರೆ.

ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್

ಗಾಜಾದಲ್ಲಿ ಕದನ ವಿರಾಮ ಸ್ಥಾಪಿಸಲು ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಹಾಗೂ ಅಮೇರಿಕಾ ಅಧ್ಯಕ್ಷ ಜೋಸೆಫ್ ಬೈಡೆನ್ ಅವರು ಮತ್ತೊಮ್ಮೆ ಮಾತುಕತೆಯನ್ನು ನಡೆಸಿದ್ದಾರೆ. 

ಜೋರ್ಡಾನ್ ದೇಶದ ರಾಜ ದ್ವಿತೀಯ ಅಬ್ದುಲ್ಲಾ ಅವರು ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಆರಂಭವಾದಾಗಿನಿಂದಲೂ ಸಹ ಗಾಜಾ ಪ್ರದೇಶದಲ್ಲಿ ಶತಾಯಗತಾಯ ಶಾಂತಿಯನ್ನು ಸ್ಥಾಪಿಸಲೇ ಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕೂಡಲೇ ಗಾಜಾ ಪ್ರದೇಶದಲ್ಲಿ ಕದನ ವಿರಾಮವುಂಟಾಗಿ, ಮಾನವೀಯ ನೆರವನ್ನು ತಲುಪಿಸಲು ಹಾದಿಗಳನ್ನು ತೆರೆಯಬೇಕು, ಕ್ಷಿಪಣಿ ದಾಳಿಗಳನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ.

ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಧಾನಕಾರರಾಗಿ, ಕದನವಿರಾಮ ಘೋಷಣೆಗಾಗಿ ಈಜಿಪ್ಟ್ ದೇಶದೊಂದಿಗೆ ರಾಜ ದ್ವಿತೀಯ ಅಬ್ದುಲ್ಲಾ ಅವರೂ ಸಹ ಅನೇಕ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸಿದ್ದಾರೆ. ಇದೀಗ ಇವರು ಹಾಗೂ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಕರೆ ನೀಡಿದ್ದಾರೆ.  

27 July 2024, 17:32