2024.07.31 Father Mika Sueliman 2024.07.31 Father Mika Sueliman 

ಅಪಹರಣದವಾಗಿ ಎರಡು ವಾರಗಳ ನಂತರ ಸೇವಾಕಾರ್ಯಕ್ಕೆ ಹಿಂತಿರುಗಿದ ನೈಜೀರಿಯಾ ಕಥೋಲಿಕ ಗುರು

ಫಾದರ್ ಮಿಕಾ ಸುಲೈಮಾನ್ ಎಂಬ ಕಥೋಲಿಕ ಗುರುವೊಬ್ಬರು ಡಕಾಯಿತರು ಅವರನ್ನು ಅಪಹರಿಸಿದ ಎರಡು ವಾರಗಳ ನಂತರ ತಮ್ಮ ಧರ್ಮಕೇಂದ್ರ ಡಂಭಾಕ್ಕೆ ಮರಳಿದ್ದಾರೆ. ಈ ಕುರಿತು ಅವರ ಅಪಹರಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ವರದಿ: ಸಿಸ್ಟರ್ ಕತ್ಲೆಹೋ ಕಾಂಗ್, ಎಸ್.ಎನ್.ಜೆ.ಎಂ., ಅಜಯ್ ಕುಮಾರ್

ಫಾದರ್ ಮಿಕಾ ಸುಲೈಮಾನ್ ಎಂಬ ಕಥೋಲಿಕ ಗುರುವೊಬ್ಬರು ಡಕಾಯಿತರು ಅವರನ್ನು ಅಪಹರಿಸಿದ ಎರಡು ವಾರಗಳ ನಂತರ ತಮ್ಮ ಧರ್ಮಕೇಂದ್ರ ಡಂಭಾಕ್ಕೆ ಮರಳಿದ್ದಾರೆ. ಈ ಕುರಿತು ಅವರ ಅಪಹರಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ನೈಜೀರಿಯಾದ ಸೊಕೋಟೋ ಧರ್ಮಕ್ಷೇತ್ರದ ಗುರುವಾಗಿರುವ ಇವರನ್ನು ಡಕಾಯಿತರು ಜುಲೈ ೨೨ ರಂದು ಅವರ ಧರ್ಮಕೇಂದ್ರ ಸಂತ ರೈಮಂಡರ ಕಥೋಲಿಕ ದೇವಾಲಯದಿಂದ ಅಪಹರಿಸಿದ್ದರು. ಇದಾದ ಎರಡು ವಾರಗಳ ನಂತರ ಅವರು ಬಿಡುಗಡೆಗೊಂಡು ತಮ್ಮ ಧರ್ಮಕೇಂದ್ರಕ್ಕೆ ಮರಳಿದ್ದಾರೆ.

ತನ್ನ ಅಪಹರಣದ ನಂತರ ಅವರಿಗೆ ಸಿಕ್ಕ ವೈದ್ಯಕೀಯ ಹಾಗೂ ಮಾನಸಿಕ ಅರೋಗ್ಯ ನೆರವು ಅವರು ತಮ್ಮ ಸೇವಾಕಾರ್ಯಕ್ಕೆ ಮರಳುವಂತೆ ಮಾಡಿದೆ ಎಂದು ಫಾದರ್ ಸುಲೈಮಾನ್ ಅವರು ವ್ಯಾಟಿಕನ್ ನ್ಯೂಸ್ ಸುದ್ದಿಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

ಇತ್ತೀಚೆಗೆ ನೈಜೀರಿಯಾ ದೇಶದಲ್ಲಿ ಕಥೋಲಿಕ ಗುರುಗಳನ್ನು ಅಪಹರಿಸುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

01 August 2024, 16:00