ಆಸ್ಟ್ರೇಲಿಯಾದ ಬಿಷಪ್ ಕ್ರಿಸ್ಟೋಫರ್ ಸಾಂಡರ್ಸ್ ಮೇಲೆ 19 ಲೈಂಗಿಕ ಆರೋಪಗಳು
ವರದಿ: ಜೋಸೆಫ್ ಟಲ್ಲೋಚ್
ಪಶ್ಚಿಮ ಆಸ್ಟ್ರೇಲಿಯಾದ ಬ್ರೂಮ್ ಧರ್ಮಕ್ಷೇತ್ರದ ಮಾಜಿ ಧರ್ಮಾಧ್ಯಕ್ಷರಾದ ಬಿಷಪ್ ಕ್ರಿಸ್ಟೋಫರ್ ಸಾಂಡರ್ಸ್ ಅವರನ್ನು ಬುಧವಾರ ಬಂಧಿಸಲಾಗಿದೆ. ವರದಿಗಳ ಪ್ರಕಾರ ಅವರನ್ನು ಗುರುವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಜೂನ್ ತಿಂಗಳಲ್ಲಿ ನಡೆಯುವ ಮುಂದಿನ ವಿಚಾರಣೆಯವರೆಗೂ ತಮ್ಮ ನಿವಾಸದಲ್ಲಿರುವಂತೆ ಸೂಚಿಸಲಾಗಿದೆ.
ಅವರ ಮೇಲೆ ಎರಡು ಅತ್ಯಾಚಾರ ಪ್ರಕರಣಗಳು 14 ದೌರ್ಜನ್ಯ ಪ್ರಕರಣಗಳು ಹಾಗೂ ಅಧಿಕಾರದಲ್ಲಿದ್ದುಕೊಂಡು ಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಂಡ ಮೂರು ಪ್ರಕರಣಗಳನ್ನು ಹೊರಿಸಲಾಗಿದೆ.
ಆಸ್ಟ್ರೇಲಿಯಾದ ಕಥೋಲಿಕ ಧರ್ಮಧ್ಯಕ್ಷರ ಮಂಡಳಿಯ ಅಧ್ಯಕ್ಷ ಆರ್ಚ್’ಬಿಷಪ್ ತಿಮಥಿ ಕೋಸ್ಟಲ್ಲೋ ಅವರ ಪ್ರಕಾರ ಈ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ದೂರುದಾರರಿಗೆ ಇದು ಅತ್ಯಂತ ಯಾತನಾಮಯವಾಗಿದೆ.
"ಈ ಆರೋಪಗಳನ್ನು ತನಿಖೆಗೆ ಒಳಪಡಿಸುವುದು ಸರಿಯಾಗಿದೆ ಹಾಗೂ ಅತ್ಯಂತ ಅವಶ್ಯಕವಾಗಿದೆ" ಎಂದು ಆರ್ಚ್'ಬಿಷಪ್ ಕೊಸ್ಟೆಲ್ಲೊ ಹೇಳಿದ್ದಾರೆ. ಧರ್ಮಸಭೆಯು ಪೊಲೀಸರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಎಂದೂ ಸಹ ಅವರು ತಿಳಿಸಿದ್ದಾರೆ.
ಬಿಷಪ್ ಸಾಂಡರ್ಸ್ ಅವರ ಮೇಲೆ ಮೊದಲ ಬಾರಿಗೆ 2020 ರಲ್ಲಿ ಆರೋಪಗಳು ಕೇಳಿ ಬಂದಿದ್ದವು. ಅದಾದ ನಂತರ ಧರ್ಮಸಭೆಯ ವತಿಯಿಂದ ಇವರ ಮೇಲೆ ಪೋಪ್ ಫ್ರಾನ್ಸಿಸ್ ತನಿಖೆಗೆ ಆದೇಶಿಸಿದ್ದರು. ತದನಂತರ ಬಿಷಪ್ ಸಾಂಡರ್ಸ್ ತಮ್ಮಮಪದವಿಗೆ ರಾಜಿನಾಮೆಯನ್ನು ಸಲ್ಲಿಸಿದ್ದರು.