ಇರಾಕಿನ ಒಂದು ಚರ್ಚ್ ಇರಾಕಿನ ಒಂದು ಚರ್ಚ್ 

ಇರಾಕಿನ ಕ್ರೈಸ್ತರಿಗೆ ಇನ್ನೂ ಅಭದ್ರತೆ ಕಾಡುತ್ತಿದೆ

ಪೋಪ್ ಫ್ರಾನ್ಸಿಸ್ ಅವರು ಇರಾಕ್ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ ಮೂರು ವರ್ಷಗಳ ನಂತರ, ಅವರ ಭೇಟಿಯ ಫಲಿತಾಂಶಗಳು ಈಗಷ್ಟೇ ಗೋಚರಿಸುತ್ತಿವೆ ಎಂದು ಹೇಳಿರುವ ಮೊಸುಲ್ ಹಾಗೂ ಆಕ್ರಾ ಮಹಾಧರ್ಮಕ್ಷೇತ್ರದ ಚಾಲ್ಡಿಯನ್ ಮಹಾಧರ್ಮಾಧ್ಯಕ್ಷ ಮೈಕಲ್ ನಜೀಬ್, ಇನ್ನೂ ಸಹ ಇರಾಕಿ ಕ್ರೈಸ್ತರಿಗೆ ಅಭದ್ರತೆ ಕಾಡುತ್ತಿದೆ ಎಂದು ಹೇಳಿದ್ದಾರೆ.

ವರದಿ: ಜಿಯನ್ ಚಾರ್ಲ್ಸ್ ಪುಟ್ಝೋಲು ಮತ್ತು ಲೀಸಾ ಝೇಂಗಾರಿನಿ

ಮಾರ್ಚ್ 5, 2021 ರಲ್ಲಿ ಪೋಪ್ ಫ್ರಾನ್ಸಿಸ್ ಇರಾಕ್ ದೇಶಕ್ಕೆ ತಮ್ಮ ಪ್ರೇಷಿತ ಪ್ರಯಾಣವನ್ನು ಕೈಗೊಂಡರು. ಆ ಮೂಲಕ ಅವರು ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡಿದ ಮೊದಲ ಪೋಪ್ ಎಂಬ ಕೀರ್ತಿಗೆ ಭಾಜನರಾದರು.

ಅಲ್ಲಿ ಅವರು ತಂಗಿದ್ದ ನಾಲ್ಕು ದಿನದ ಅವಧಿಯಲ್ಲಿ, ಬಾಗ್ದಾದ್ ನಗರಕ್ಕೆ ಹಾಗೂ ಪಿತಾಮಹ ಅಬ್ರಹಾಮನ ಜನ್ಮಸ್ಥಳ ಊರ್ ಎಂಬ ಪ್ರದೇಶಕ್ಕೆ ಭೇಟಿ ನೀಡಿದರು ಮಾತ್ರವಲ್ಲದೆ, ಇರಾಕ್ ದೇಶದ ಪ್ರಮುಖ ನಗರಗಳಾದ ನಜಾಫ್, ನಸ್ಸೀರಿಯ, ಎರ್ಬಿಲ್, ಮೊಸುಲ್ ಹಾಗೂ ಕಾರಕೋಶ್ ನಗರಗಳಿಗೆ ಭೇಟಿ ನೀಡಿ, ಅಲ್ಲಿನ ಕ್ರೈಸ್ತ ಸಮುದಾಯಗಳನ್ನು ಸಂಧಿಸಿ, ಧಾರ್ಮಿಕ ಹಾಗೂ ರಾಜಕೀಯ ನಾಯಕರುಗಳೊಂದಿಗೆ ಚರ್ಚಿಸಿದರು.

ಈ ಭೇಟಿಯ ಮೂಲ ಗುರಿ ಇರಾಕ್ ದೇಶದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಕ್ರೈಸ್ತರಿಗೆ ಆಧ್ಯಾತ್ಮಿಕ ಬೆಂಬಲ ಹಾಗೂ ಸಾಂತ್ವನವನ್ನು ನೀಡುವುದಾಗಿತ್ತು. ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿಗಳಿಗೆ ಒಳಗಾಗಿರುವ ಕ್ರೈಸ್ತರು ಹಾಗೂ ಕ್ರೈಸ್ತೇತರರ ನಡುವೆ ಅಂತರ್ಧರ್ಮೀಯ ಸಂವಾದವನ್ನು ಪ್ರೋತ್ಸಾಹಿಸುವುದು ಪೋಪ್ ಅವರ ಭೇಟಿಯ ಗುರಿಯಾಗಿತ್ತು.

40 ಮಿಲಿಯನ್ ಜನರು ವಾಸಿಸುತ್ತಿರುವ ದೇಶದಲ್ಲಿ ಕ್ರೈಸ್ತ ಜನಸಂಖ್ಯೆಯು ಗುರುತರವಾಗಿ ಇಳಿಮುಖವಾಗುತ್ತಿದೆ. 2003 ರಲ್ಲಿ 1.4 ಮಿಲಿಯನ್ ಇದ್ದ ಕ್ರೈಸ್ತರ ಜನಸಂಖ್ಯೆ ಈಗ ಕೇವಲ 2,50,000 ದಷ್ಟಾಗಿದೆ.

ಮಹಾಧರ್ಮಾಧ್ಯಕ್ಷ ಮೈಕಲ್ ನಜೀಬ್ ಅವರ ಪ್ರಕಾರ ಪೋಪ್ ಅವರು ಇಲ್ಲಿಗೆ ಭೇಟಿ ನೀಡುವ ಮೂಲಕ, ಇಲ್ಲಿಂದ ವಲಸೆ ಹೋಗಿದ್ದ ಕ್ರೈಸ್ತರನ್ನು ಮತ್ತೆ ಇಲ್ಲಿ ನೆಲೆಯೂರಬೇಕೆಂದು ಪ್ರೋತ್ಸಾಹಿಸಿದಾಗ ಹಲವಾರು ಜನರು ಇಲ್ಲಿ ಬಂದು, ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. 2007 ರಲ್ಲಿ ಐಸಿಸ್ ಉಗ್ರರನ್ನು ಸೋಲಿಸಿದ ನಂತರವೂ ಸಹ ಸಾಕಷ್ಟು ಜನರು ಇಲ್ಲಿಗೆ ಬಂದು ಜೀವಿಸುವುದಕ್ಕೆ ಹೆದರುತ್ತಿದ್ದಾರೆ. ಹಲವಾರು ಕುಟುಂಬಗಳು ಇಲ್ಲಿಂದ ವಲಸೆ ಹೋಗುವುದನ್ನು ಮುಂದುವರೆಸಿವೆ.

ಸ್ಥಳಿಯ ಶಸ್ತ್ರಸಜ್ಜಿತ ಗುಂಪುಗಳಿಂದ ಇಲ್ಲಿ ಕ್ರೈಸ್ತರು ಈಗಲೂ ಸಹ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಐಸಿಸ್ ದಾಳಿಯಿಂದ ನಾಶವಾಗಿದ್ದ ಇವರ ಮನೆಗಳು ಈಗಲೂ ಸಹ ಪಾಳು ಬಿದ್ದಿವೆ ಎಂದು ಮಹಾಧರ್ಮಾಧ್ಯಕ್ಷ ನಜೀಬ್ ಹೇಳುತ್ತಾರೆ.
 

08 March 2024, 12:30