FILES-BRITAIN-RWANDA-POLITICS-MIGRANTS FILES-BRITAIN-RWANDA-POLITICS-MIGRANTS  (AFP or licensors)

ಕಪೋಡ್ : ಯುಕೆಯ ರೂವಾಂಡ ಗಡಿಪಾರು ಯೋಜನೆ ಸಮಸ್ಯೆಗೆ ಸಮರ್ಪಕವಲ್ಲದೆ ದಿಕ್ಕು ತಪ್ಪಿಸಿದೆ

ರೂವಾಂಡಕ್ಕೆ ಆಶ್ರಯ ಪಡೆಯುವವರನ್ನು ಗಡಿಪಾರು ಮಾಡಲು ಅನುಮತಿಸುವ ಬ್ರಿಟನ್ನಿನ ಇತ್ತೀಚಿನ ಶಾಸನವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿರುವ ಕಥೋಲಿಕ ಧರ್ಮ ಸಭೆಯ ಸಹಾಯ ಸಂಸ್ಥೆಗಳೊಂದಿಗೆ ಕಪೋಡ್ ಸೇರಿದಂತೆ ಅನೇಕ ಮಾನವೀಯ ಸಂಘಟನೆಗಳು ತಮ್ಮ ಕಂಡನೆಯನ್ನು ತೋರಿಸಿವೆ .

ಲಿಂಡ ಬೋರ್ಡೋನಿ - ಸಿರಿಲ್ ವಿಕ್ಟರ್

ಆಶ್ರಯ ಪಡೆಯುವ ಕೆಲವರನ್ನು  ರುವಾಂಡಕ್ಕೆ  ಕಳುಹಿಸುವ  ಶಾಸನವನ್ನು  ಬ್ರಿಟಿಷ್  ಸಂಸತ್ತಿನ  ಮಂಗಳವಾರದ ಅನುಮೋದನೆಗೆ  ಕಪೋಡ್  ಪ್ರತಿಕ್ರಿಯಿಸಿ  ಇದು ಹಲವು ಹಂತಗಳಲ್ಲಿ  ನಿರಾಶೆ ತಂದಿದೆ ,   ಎಂದಿದೆ.

ವ್ಯಾಟಿಕನ್ ರೇಡಿಯೋ/  ವ್ಯಾಟಿಕಲ್ ನ್ಯೂಸ್ ನೊಂದಿಗೆ  ಮಾತನಾಡುತ್ತಾ  ನೀಲ್ ಥಾಮಸ್  ಈ ಯೋಜನೆಯನ್ನು  ಸಹಾನುಭೂತಿ ಮತ್ತು ಅಂತರಾಷ್ಟ್ರೀಯ ಜವಾಬ್ದಾರಿಯ ಕೊರತೆ  ಎಂದು ವಿವರಿಸಿದ್ದಾರೆ  ವರ್ಣಿಸಿದ್ದಾರೆ.

ಕಪೋಡ್  ಸಂಸ್ಥೆಯ  ಪರವಾಗಿ ಹೇಳುವುದಾದರೆ,  "ಈ ಶಾಸನವು  ಅನುಮೋದನೆಯನ್ನು ಪಡೆದಿರುವುದು  ನಮಗೆಲ್ಲರಿಗೂ  ನಿರಾಶೆ ತಂದಿದೆ  ಮತ್ತು ಹಲವು ಹಂತಗಳಲ್ಲಿ  ಈ ನಿರಾಶೆಯನ್ನು ಅನುಭವಿಸುತ್ತಿದ್ದೇವೆ."   "ನಾನು ತಿಳಿದಂತೆ,  ವಿಶ್ವಗುರು ಪ್ರಾನ್ಸಿಸ್ ಮತ್ತು  ಇತರರ  ಕರೆಯ ಮೇರೆಗೆ  ಸಂಕಷ್ಟದ  ಮತ್ತು ಸಮಸ್ಯೆಗಳ  ಪರಿಸ್ಥಿತಿಗಳಿಂದ  ಭಾದೀತಗೊಂಡವರಿಗೆ ಈ ಶಾಸನವು  ಯಾವ ಕಾಳಜಿ  ಮತ್ತು  ಅನುಕಂಪವನ್ನು  ತೋರಿಸುತ್ತದೆ  ಎಂದು ನನಗೆ ಭಾವಿಸುವುದಿಲ್ಲ.    

ಇದಲ್ಲದೆ  ಈ ಶಾಸನವು  ಕ್ರೈಸ್ತ ಮೌಲ್ಯಗಳನ್ನು  ಅನುಸರಿಸದೇ  ವಿಫಲವಾಗುವಲ್ಲಿ  ಮತ್ತು  ವಲಸೆಯಲ್ಲಿರುವ  ನಮ್ಮ ಸಹೋದರ ಸಹೋದರಿಯರನ್ನು  ಸ್ವಾಗತಿಸಿ  ರಕ್ಷಿಸಿ ಸಂಯೋಜಿಸಿ  ಮತ್ತು ಉತ್ತೇಜಿಸಿ ಎಂಬ ವಿಶ್ವಗುರುಗಳ ಕರೆಯನ್ನು  ಎತ್ತಿ ತೋರಿಸಿದರು  ಅಷ್ಟಲ್ಲದೆ  ಈ ಶಾಸನದ  ಮತ್ತು ಭಾವನೆಗಳ ನಡುವಿನ  ಸಂಬಂಧವು  ಸಂಪೂರ್ಣವಾಗಿ  ಕಡಿದು ಹೋಗಿದೆ ಹೋಗಿದೆ  ಉಕ್ರೇನ್  ಮತ್ತು ಇನ್ನಿತರೆ ಪ್ರದೇಶಗಳಿಂದ  ಬಂದಂತಹ ವಲಸಿಗರಿಗೆ  ನೀಡಿದಂತಹ ವ್ಯಾಪಕವಾದ ಸ್ವಾಗತವನ್ನು  ಇಲ್ಲಿ ಸ್ಮರಿಸಬಹುದು.

ಸಮಸ್ಯೆಯನ್ನು  ದಿಕ್ಕು ತಪ್ಪಿಸುವುದು

ಈ ಶಾಸನವು  ನಿರಾಶ್ರಿತರ ಬಿಕ್ಕಟ್ಟಿನ ಸಮಸ್ಯೆಗಳನ್ನು  ಲೆಕ್ಕಿಸದೆ  ವಾಸ್ತವದಲ್ಲಿ  ಬಹು ಪಾಲು ಸ್ಥಳಾಂತರಗೊಂಡ ವ್ಯಕ್ತಿಗಳು  ಯುರೋಪ್ಗಿಂತ ಹೆಚ್ಚಾಗಿ  ಯುರೋಪ್  ಗಿಂತ  ಹೆಚ್ಚಾಗಿ  ನೆರೆಯ ದೇಶಗಳಲ್ಲಿ  ಆಶ್ರಯ ಪಡೆಯುವುದನ್ನು ನೋಡುತ್ತದೆ  ಇಂತಹ  ದುರ್ಬಲರ  ಪರಿಸ್ಥಿತಿಯನ್ನು  ಬೆಂಬಲಿಸದೆ  ಬ್ರಿಟನ್ ಸರ್ಕಾರವು  ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದೆ  ಎಂದು   ಕಪೋಡ್  ಅಡ್ವೋಕಸಿ  ಮತ್ತು  ಕಮ್ಯುನಿಕೇಷನ್ ಡೈರೆಕ್ಟರ್  ವಿಷಾದಿಸಿದ್ದಾರೆ.

ಘನತೆಗೆ ಗೌರವ

ಕಡೆಯದಾಗಿ,   ದುರ್ಬಲ ಜನರನ್ನು ರಕ್ಷಿಸಲು  ಕಾನೂನುಗಳು  ಸದಾ  ಮಾನವಿಯ ನೀತಿಗಳಾಗಬಹುದು  ಮತ್ತು ಇರಬೇಕು.  ಕಾನೂನುಗಳು  ಜನರು ಬರಲು ಅನುವು ಮಾಡಿಕೊಡುವ ಮಾನವೀಯ ಮಾರ್ಗಗಳಾಗಿರಬಹುದು  ಎಂದು  ತನ್ನ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ  ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ  ಹಕ್ಕುಗಳನ್ನು ನಿರ್ಣಯಿಸಬಹುದು  ಆದರೆ  ಆ ರೀತಿಯ ಚೌಕಟ್ಟಿನೊಳಗೆ ವಲಸಿಗರು ಮತ್ತು ಆಶ್ರಯ ಪಡೆಯುವವರನ್ನು  ಸ್ವಾಗತಿಸುತ್ತಾ  ಅವರ ಘನತೆಗೆ ಗೌರವವನ್ನು  ವಿವಿಧ ಪರಿಹಾರಗಳಿಂದ ನೀಡಬಹುದು ಎಂದು ವಿವರಿಸಿದರು. ಅಂತರಾಷ್ಟ್ರೀಯ ಕಟ್ಟುಪಾಡುಗಳನ್ನು ಕಾಪಾಡುವಾಗ  ಸಹಾನುಭೂತಿಯನ್ನು ಕಡೆಗಣಿಸದೆ  ಸ್ಥಳಾಂತರದ ಆಧಾರವಾಗಿರುವ ಕಾರಣಗಳನ್ನು ಪರಿಹರಿಸಲು  ದಂಡನಾತ್ಮಕ ಕ್ರಮಗಳನ್ನು  ಬಳಸುವುದು ನಿಜವಾಗಿಯೂ ಸರಿಯಲ್ಲ.

24 April 2024, 15:19