ಗಾಜಾ ಪ್ರದೇಶಕ್ಕೆ ತೆರಳುವ ಮೂಲಕ ಭರವಸೆ, ಐಕ್ಯತೆ ಹಾಗೂ ಬೆಂಬಲವನ್ನು ಸೂಚಿಸಿದ ಕಾರ್ಡಿನಲ್ ಪಿಝಾಬಲ್ಲ
ವರದಿ: ಲಿಂಡಾ ಬೋರ್ಡೊನಿ, ಅಜಯ್ ಕುಮಾರ್
ಕಳೆದ ಅಕ್ಟೋಬರ್ ತಿಂಗಳಿಂದ ಈವರೆಗೂ ಯುದ್ಧ ನಡೆಯುತ್ತಿರುವ ಗಾಜಾ ಪ್ರದೇಶದಲ್ಲಿರುವ ಪವಿತ್ರ ಕುಟುಂಬದ ದೇವಾಲಯದಕ್ಕೆ ಜೆರುಸಲೇಮಿನ ಲ್ಯಾಟಿನ್ ಪೇಟ್ರಿಯಾರ್ಕ್ ಆಗಿರುವ ಕಾರ್ಡಿನಲ್ ಪಿಯೆರ್ಬಟಿಸ್ಟಾ ಪಿಝಾಬಲ್ಲ ಅವರು ತಮ್ಮ ಭೇಟಿಯ ಮೂಲಕ ಅಲ್ಲಿನ ಜನತೆಗೆ ಭರವಸೆಯನ್ನು ನೀಡಿದ್ದು, ಬೆಂಬಲವನ್ನೂ ಸಹ ಸೂಚಿಸಿದ್ದಾರೆ.
ಲ್ಯಾಟಿನ್ ಪೇಟ್ರಿಯಾರ್ಕ್ ಅವರ ಜೊತೆಗೆ ಮಾಲ್ಟಾ ಧಾರ್ಮಿಕ ಸಭೆಯ ಗ್ರ್ಯಾಂಡ್ ಹಾಸ್ಪಿಟಲ್ಲರ್ ಆಗಿರುವ ಫಾದರ್ ಅಲೆಸಾಂಡ್ರೋ, ಗಾಜಾದ ಧರ್ಮಕೇಂದ್ರದ ಗುರು ಫಾದರ್ ರೊಮಾನೆಲ್ಲಿ ಅವರು ಇಲ್ಲಿಗೆ ಭೇಟಿ ನೀಡಿದರು.
ಜೆರುಸಲೇಮಿನ ಲ್ಯಾಟಿನ್ ಪೇಟ್ರಿಯಾರ್ಕ್ ಕಚೇರಿಯ ಮಾಧ್ಯಮ ಹೇಳಿಕೆಯ ಪ್ರಕಾರ ಕಾರ್ಡಿನಲ್ ಪಿಝಾಬಲ್ಲ ಅವರು ಅಲ್ಲಿಗೆ ಭೇಟಿ ನೀಡಿ, ಯಾತನೆಯನ್ನು ಪಡುತ್ತಿರುವ ಸಂತ್ರಸ್ಥರಿಗೆ ಧೈರ್ಯದಿಂದಿರುವಂತೆ ಹೇಳಿ, ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಲ್ಲಿನ ಆರ್ಥಡಾಕ್ಸ್ ಧರ್ಮಕೇಂದ್ರಕ್ಕೂ ಸಹ ಅವರು ಭೇಟಿ ನೀಡಿದ್ದಾರೆ. ಅಲ್ಲಿ ಅವರು ಸ್ಥಳೀಯ ಭಕ್ತಾಧಿಗಳೊಂದಿಗೆ ಸೇರಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ.
"ನಾನು ಬಹಳ ಕಾಲದಿಂದ ಇಲ್ಲಿಗೆ ಬಂದು ಇಲ್ಲಿನ ಕ್ರೈಸ್ತ ಸಮುದಾಯವನ್ನು ಭೇಟಿ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದೆ. ಕೊನೆಗೆ ಅದು ಈಡೇರಿದೆ. ನನಗೆ ಸಂತೋಷವಾಗಿದೆ" ಎಂದು ಕಾರ್ಡಿನಲ್ ಪಿಝಾಬಲ್ಲ ಅವರು ಹೇಳಿದ್ದಾರೆ. ಗಾಜಾ ಪ್ರದೇಶದ ಕ್ರೈಸ್ತ ಸಮುದಾಯಕ್ಕಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.
ಪವಿತ್ರ ಕುಟುಂಬ ಧರ್ಮಕೇಂದ್ರವು ಗಾಜಾ ಪಟ್ಟಿಯಲ್ಲಿನ ಏಕೈಕ ಕಥೋಲಿಕ ಧರ್ಮಕೇಂದ್ರವಾಗಿದೆ.
ಗಾಜಾದ ಇತರೆ ಪ್ರದೇಶಗಳಂತೆ ಪವಿತ್ರ ಕುಟುಂಬವೂ ಸಹ ಆಹಾರ, ನೀರು ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಧರ್ಮಕೇಂದ್ರವನ್ನು ಇನ್ಸ್ಟಿಟ್ಯೂಟ್ ಆಫ್ ದಿ ಇನ್ಕಾರ್ನೆಟ್ ವರ್ಡ್ ಧಾರ್ಮಿಕ ಸಭೆಯ ಗುರುಗಳು ಮುನ್ನಡೆಸುತ್ತಿದ್ದಾರೆ.