ಇಂಗ್ಲೆಂಡ್ ಹಾಗೂ ವೇಲ್ಸ್ ಧರ್ಮಧ್ಯಕ್ಷರು ಶಸ್ತ್ರಾಸ್ತ್ರ ತ್ಯಜಿಸುವಿಕೆಗಾಗಿ ಹೇಳಿಕೆಯನ್ನು ನೀಡಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್ನ ಕಥೋಲಿಕ ಧರ್ಮಧ್ಯಕ್ಷರ ಸಮಿತಿಯು ಶಸ್ತ್ರಾಸ್ತ್ರ ತ್ಯಜಿಸುವಿಕೆಯ ಕುರಿತು ಈ ವಾರ "ಶಾಂತಿಯ ಸಾಧಕರಾಗಲು ಕರೆ" ಎಂಬ ಶೀರ್ಷಿಕೆಯನ್ನು ಹೊಂದಿರುವ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸುವಿಕೆ ಹಾಗೂ ಹೆಚ್ಚುತ್ತಿರುವ ಅಂತರಾಷ್ಟ್ರೀಯ ಬಿಕ್ಕಟ್ಟಿಗೆ ಕಥೋಲಿಕ ಪ್ರತಿಕ್ರಿಯೆಯ ಕುರಿತು ಇದು ಬೆಳಕನ್ನು ಚೆಲ್ಲುತ್ತದೆ.

ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್

ಇಂಗ್ಲೆಂಡ್ ಹಾಗೂ ವೇಲ್ಸ್ ಕಥೋಲಿಕ ಧರ್ಮಧ್ಯಕ್ಷರ ಸಮಿತಿಯ ಅಂತರರಾಷ್ಟ್ರೀಯ ವಿಭಾಗವು ಶಸ್ತ್ರಾಸ್ತ್ರ ತ್ಯಜಿಸುವಿಕೆಯ ಕುರಿತು ಈ ವಾರ ಶಾಂತಿಯ ಸಾಧಕರಾಗಲು ಕರೆ ಎಂಬ ಶೀರ್ಷಿಕೆಯನ್ನು ಹೊಂದಿರುವ ದಾಖಲೆಯನ್ನು ಬಿಡುಗಡೆ ಮಾಡಿದೆ. ಈ ದಾಖಲೆಯು ಶಸ್ತ್ರಾಸ್ರ ತ್ಯಜಿಸುವಿಕೆ ಕುರಿತು ಹಾಗೂ ಅದಕ್ಕೆ ಕಥೋಲಿಕ ಪ್ರತಿಕ್ರಿಯೆ ಹೇಗಿರಬೇಕು ಎಂಬುದರ ಕುರಿತು ಮಾಹಿತಿಯನ್ನು ಒಳಗೊಂಡಿದೆ.

20 ಪುಟಗಳ ಈ ದಾಖಲೆಯು ಕಥೋಲಿಕರು ನಿಜವಾಗಿಯೂ ಏಸುಕ್ರಿಸ್ತರ ಮೌಲ್ಯಗಳನ್ನು ಪಾಲಿಸುವಂತಹವರಾಗಿದ್ದರೆ ಪ್ರಸ್ತುತ ಜಗತ್ತಿನಲ್ಲಿ ನಿರ್ಮಿಸಲಾಗುತ್ತಿರುವ ಶಸ್ತ್ರಾಸ್ತ್ರಗಳ ಪ್ರಕ್ರಿಯೆಯನ್ನು ಕೊನೆಗೊಳಿಸಬೇಕು ಅಥವಾ ಕನಿಷ್ಠಪಕ್ಷ ಅವುಗಳನ್ನು ಗಣನೀಯವಾಗಿ ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಅಧೀನದಲ್ಲಿರುವ ಎಲ್ಲಾ ಶಕ್ತಿಗಳನ್ನು ನಾವು ಉಪಯೋಗಿಸಿಕೊಂಡು ಮುಂದುವರೆಯಬೇಕು ಎಂದು ಹೇಳಿದೆ.

ಈ ದಾಖಲೆಯು ಮೂರು ಅಧ್ಯಾಯಗಳನ್ನು ಒಳಗೊಂಡಿದ್ದು, ಇವುಗಳು ಹೆಚ್ಚುತ್ತಿರುವ ಜಾಗತಿಕ ಭಿಕ್ಕಟ್ಟುಗಳು ಹಾಗೂ ಶಸ್ತ್ರಾಸ್ತ್ರಗಳ ಅನಿಯಮಿತ ಉತ್ಪಾದನೆ ಹಾಗೂ ಅವುಗಳಿಗೆ ಕ್ರೈಸ್ತರ ಪ್ರತಿಕ್ರಿಯೆ ಹೇಗಿರಬೇಕು ಎಂಬುದರ ಕುರಿತು ಮಾಹಿತಿಯನ್ನು ಒಳಗೊಂಡಿದ್ದು, ಸಮಾಜದ ವಿವಿಧ ಸ್ಥರಗಳಲ್ಲಿರುವ ಕಥೋಲಿಕರಿಗೆ ಇದರ ವಿರುದ್ಧ ಧ್ವನಿಯೆತ್ತುವಂತೆ ಹಾಗೂ ಕಾರ್ಯನಿರ್ವಹಿಸುವಂತೆ ಕರೆ ನೀಡುತ್ತದೆ.

24 May 2024, 17:26