ಮುಂದಿನ ಸಾರ್ವಜನಿಕ ದರ್ಶನದಲ್ಲಿ 15 ವರ್ಷಗಳನ್ನು ಪೂರೈಸುತ್ತಿರುವ ತಲಿಥಾ ಕೂ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ವಿಶ್ವದ ಸುಮಾರು ತೊಂಬತ್ತು ದೇಶಗಳ ಸುಮಾರು ಇನ್ನೂರು ತಲಿಥಾ ಕೂಮ್ ಕಾರ್ಯಕರ್ತರು ರೋಮ್ ನಗರಕ್ಕೆ ಆಗಮಿಸಲಿದ್ದು, ತಮ್ಮ ಸಂಘಟನೆ ತಲಿತಾ ಕೂಮ್ ನ ಹದಿನೈದನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. ಇವರಲ್ಲಿ ಗುರುಗಳು, ಕನ್ಯಾಸ್ತ್ರೀಯರು, ಮಾನವ ಕಳ್ಳಸಾಗಣೆಯ ಕಾರ್ಯಕರ್ತರು ಹಾಗೂ ಮಾನವ ಕಳ್ಳಸಾಗಣೆಯ ಸಂತ್ರಸ್ಥರು ಭಾಗವಹಿಸಲಿದ್ದಾರೆ.
ಮೇ 18 ರಿಂದ 24 ರವರೆಗೆ ಸಾಕ್ರೋಫಾನೋದಲ್ಲಿನ ಫ್ರತೆರ್ನಾ ದೊಮುಸ್ ಎಂಬಲ್ಲಿ ನಡೆಯಲಿರು ಈ ಕಾರ್ಯಕ್ರಮದ ಈ ವರ್ಷದ ಶೀರ್ಷಿಕೆಯು "ಮಾಣವ ಕಳ್ಳಸಾಗಣೆಯನ್ನು ನಿಲ್ಲಿಸಲು ಒಂದಾಗಿ ಪಯಣಿಸುವುದು" ಎಂಬುದಾಗಿದೆ.
ಈ ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಣಿಕೆಯ ಸಂತ್ರಸ್ಥರು ಹಾಗೂ ಅದನ್ನು ತಡೆಗಟ್ಟುವಲ್ಲಿ ಹೋರಾಡಿದವರು ಈ ಪ್ರಕ್ರಿಯೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮಾನವ ಕಳ್ಳಸಾಗಣಿಕೆಯನ್ನು ಸಂಘಟಿತರಾಗಿ ಹೇಗೆ ತಡೆಗಟ್ಟುವುದು ಎಂಬ ಕುರಿತು ಚರ್ಚೆ ಹಾಗೂ ಸಂವಾದಗಳು ಸಹ ನಡೆಯಲಿವೆ.
ಈ ಸಂದರ್ಭದಲ್ಲಿ ವಿಶೇಷ ಧೈರ್ಯ ಹಾಗೂ ಪ್ರತಿಭೆಯನ್ನು ತೋರಿಸಿದ ಮೂರು ಕಥೋಲಿಕ ಕನ್ಯಾಸ್ತ್ರೀಯರನ್ನು ಸನ್ಮಾನಿಸಿ, ಅಭಿನಂದಿಸಲಾಗುತ್ತದೆ.
ಸಾಕ್ರೊಫಾನೋದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುತ್ತದೆ.