ಬೊಲಿವಿಯಾ ದೇಶದ ಧರ್ಮಾಧ್ಯಕ್ಷರು ತಮ್ಮ ಧರ್ಮಕ್ಷೇತ್ರಗಳಲ್ಲಿ ಡಿಜಿಟಲೀಕರಣ ಆರಂಭಿಸಿದ್ದಾರೆ.

ಪಾಂಡೋ ಪ್ರೇಷಿತ ವಿಕಾರಿಯೇಟ್ ನಿಂದ ಆರಂಭಿಸಿ ಬೊಲಿವಿಯಾ ದೇಶದ ಎಲ್ಲಾ ಧರ್ಮಕ್ಷೇತ್ರಗಳಲ್ಲಿ ಧರ್ಮಕೇಂದ್ರದ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಅಲ್ಲಿನ ಧರ್ಮಧ್ಯಕ್ಷರುಗಳು ಆರಂಭಿಸಿದ್ದಾರೆ.

ವರದಿ: ಜೆಸ್ಸಿಕಾ ಜಯಮರಿದಾಸ್, ಅಜಯ್ ಕುಮಾರ್ 

"ನಮ್ಮ ಧರ್ಮಕೇಂದ್ರಗಳಲ್ಲಿ ಡಿಜಿಟಲೀಕರಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದು ನಮ್ಮ ಧರ್ಮಕೇಂದ್ರಗಳ ದಾಖಲೆಗಳನ್ನು ತಂತ್ರಜ್ಞಾನದಿಂದ ಹೆಚ್ಚು ಜನರಿಗೆ ಸುಲಭವಾಗಿ ದೊರಕುವಂತೆ ಮಾಡಲು ಸಹಾಯಕವಾಗುತ್ತದೆ. ಇದರೊಂದಿಗೆ ಧರ್ಮಸಭೆಯು ಭಕ್ತ ವಿಶ್ವಾಸಿಗಳು ಅವರಿಗೆ ಸಂಪರ್ಕವನ್ನು ಸಾಧಿಸಲು ಸಹ ಸಹಾಯಕವಾಗುತ್ತದೆ." ಹೀಗೆಂದು ಹೇಳಿದವರು ರೈಸ್ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಆಗಿರುವ ಬಿಷಪ್ ಕೂಟರ್ ಅವರು.

ಈ ರೀತಿ ಆದರೆ ಭಕ್ತವಿಶ್ವಾಸಗಳು ತಮ್ಮ ದಾಖಲೆಗಳನ್ನು ಯಾವುದೇ ಸಮಯವನ್ನು ಹಾಗೂ ಹಣವನ್ನು ವ್ಯಯಿಸದೆ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ಉಪಕ್ರಮವನ್ನು ಬೊಲಿವಿಯಾ ದೇಶದ ಧರ್ಮಧ್ಯಕ್ಷರುಗಳ ಮಂಡಳಿಯು ಪ್ರಕಟಿಸಿದೆ. 

ಈ ಉಪಕ್ರಮವು ಧರ್ಮಸಭೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನೆಟ್ಟಿನಲ್ಲಿ ಮುಂದುವರೆದಿದೆ ಎಂಬುದನ್ನು ಸೂಚಿಸುತ್ತದೆ ಮಾತ್ರವಲ್ಲದೆ, ಧರ್ಮಸಭೆಯು ತನ್ನ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

11 June 2024, 17:43