ಹುಡುಕಿ

ಕಾರ್ಡಿನಲ್ ಜೆರ್ನಿ: ಸಮುದ್ರ ನಾವಿಕರು ಅನ್ಯಾಯ, ಶೋಷಣೆ ಹಾಗೂ ಅಸಮಾನತೆಗೆ

ಸೀ ಸಂಡೇ ಅಥವಾ ಸಮುದ್ರ ಭಾನುವಾರಕ್ಕೆ ನೀಡಿದ ತಮ್ಮ ಸಂದೇಶದಲ್ಲಿ ಕಾರ್ಡಿನಲ್ ಜೆರ್ನಿ ಅವರು "ಸಮುದ್ರ ನಾವಿಕರು ಸಾಗರದ ಅನನ್ಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ; ಅದೇ ವೇಳೆ, ದೈಹಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಅಂಧಕಾರವನ್ನು ಅನುಭವಿಸುತ್ತಾರೆ ಎಂದು ಹೇಳಿದರು.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಪ್ರತಿ ವರ್ಷ ಜುಲೈ ಎರಡನೇ ಭಾನುವಾರ ಕಥೋಲಿಕ ಧರ್ಮಸಭೆಯು ಸೀ ಸಂಡೇ ಅಥವಾ ಸಮುದ್ರ ಭಾನುವಾರವನ್ನು ಆಚರಿಸುತ್ತದೆ. ಈ ಸಂದರ್ಭದಲ್ಲಿ ಧರ್ಮಸಭೆಯಾದ್ಯಂತ ಸಮುದ್ರ ನಾವಿಕರಿಗಾಗಿ ಪ್ರಾರ್ಥಿಸಲಾಗುತ್ತದೆ.

ಮಾನವ ಸಮಗ್ರ ಅಭಿವೃದ್ಧಿ ವ್ಯಾಟಿಕನ್ ಪೀಠದ ಪ್ರಿಫೆಕ್ಟ್ ಆದ ಕಾರ್ಡಿನಲ್ ಮೈಕೆಲ್ ಜೆರ್ನಿ ಅವರು ಈ ಕುರಿತು ತಮ್ಮ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. 

ತಮ್ಮ ಸಂದೇಶದಲ್ಲಿ ಮಾತನಾಡಿರುವ ಅವರು "ಸಮುದ್ರ ನಾವಿಕರು ಸಾಗರದ ಅನನ್ಯ ಸೌಂದರ್ಯವನ್ನು ಅನುಭವಿಸುತ್ತಾರೆ; ಇದೇ ವೇಳೆ ಶೋಷಣೆ, ಹಿಂಸೆ, ಅನ್ಯಾಯ ಹಾಗೂ ಅಸಮಾನತೆಯನ್ನೂ ಸಹ ಅನುಭವಿಸುತ್ತಾರೆ. ಇದು ಸತ್ಯ" ಎಂದು ಕಾರ್ಡಿನಲ್ ಮೈಕೆಲ್ ಜೆರ್ನಿ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಕ್ರೈಸ್ತ ಇತಿಹಾಸದಲ್ಲಿ ಸಮುದ್ರದ ಪಾತ್ರದ ಕುರಿತು ವಿವರಿಸಿದ್ದಾರೆ.         

24 June 2024, 18:26