ಹತ್ತು ವರ್ಷಗಳ ನಂತರ ಮೊಸುಲ್'ಗೆ ಮರಳಿದ ಹಲವು ಕ್ರೈಸ್ತ ಕುಟುಂಬಗಳು

ಇರಾಕ್ ಮತ್ತು ಸಿರಿಯಾ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ನಿರ್ನಾಮವಾದ ಹತ್ತು ವರ್ಷಗಳ ನಂತರ ಕೇವಲ ಕೆಲವೇ ಕೆಲವು ಕ್ರೈಸ್ತ ಕುಟುಂಬಗಳು ಮೊಸುಲ್ ನಗರಕ್ಕೆ ಹಿಂತಿರುಗಿವೆ.

ವರದಿ: ವ್ಯಾಟಿಕನ್ ನ್ಯೂಸ್

ಧಾರ್ಮಿಕ ಉಗ್ರವಾದದ ಹಿನ್ನೆಲೆಯಲ್ಲಿ ಬಲವಂತವಾಗಿ ತಮ್ಮ ಮನೆಗಳನ್ನು ಬಿಟ್ಟು ತೆರಳಲು ಹೇಳಿದ ಹತ್ತು ವರ್ಷಗಳ ನಂತರ ಕೆಲವು ಕ್ರೈಸ್ತ ಕುಟುಂಬಗಳು ಮೊಸುಲ್ ನಗರಕ್ಕೆ ಹಿಂತಿರುಗಿ ಬಂದಿವೆ.

ಮೊಸುಲ್ ನಗರದ ಚಾಲ್ಡಿಯನ್ ಅರ್ಚ್'ಬಿಷಪ್ ಅವರ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರರು ಧಾರ್ಮಿಕ ಹಿಂಸಾಚಾರವನ್ನು ಆರಂಭಿಸಿದ ಬಳಿಕ ಅಲ್ಲಿದ್ದ ಸುಮಾರು ೧೨೦೦ ಕ್ರೈಸ್ತ ಕುಟುಂಬಗಳ ಪೈಕಿ ಬಹುತೇಕರು ತಮ್ಮ ಮನೆ ಮಠಗಳನ್ನು ಬಿಟ್ಟು, ನಗರವನ್ನು ತೊರೆದಿದ್ದರು.

ಮುಂದುವರೆದು ಮಾತನಾಡಿದ ಅವರು ಈ ಯುದ್ಧದ ಸಂಕ್ರಮಣ ಕಾಲದಲ್ಲಿ ತನ್ನ ಗುರುಗಳು ನಿನಿವೆ ಪಟ್ಟಣದ ಕಣಿವೆಗಳಲ್ಲಿ ರಕ್ಷಣೆಯನ್ನು ಪಡೆದುಕೊಂಡಿದ್ದರು ಎಂದು ಫಿದೆಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಮ್ಮ ಸಂದರ್ಶನದಲ್ಲಿ ಅವರು ಹತ್ತು ವರ್ಷಗಳ ಹಿಂದೆ ಇಸ್ಲಾಮಿಕ್ ಉಗ್ರರು ಚರ್ಚುಗಳ ಮೇಲೆ ಹಾಗೂ ಕ್ರೈಸ್ತರ ಮೇಲೆ ನಡೆಸಿದ ಭೀಕರ ದಾಳಿಗಳನ್ನು ನೆನಪಿಸಿಕೊಂಡು, ಅಲ್ಲಿನ ಸ್ಥಳೀಯ ಧರ್ಮಸಭೆ ಅನುಭವಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.       

11 June 2024, 17:58