ಎಸ್ಟೋನಿಯಾ: ಕಥೋಲಿಕ ಶತಕ ಸಂಭ್ರಮ ರಕ್ತಸಾಕ್ಷಿಗಳ ವಿಜಯವನ್ನು ಸಂಭ್ರಮಿಸುವ ಅವಕಾಶ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
"2000 ವರ್ಷಗಳ ಇತಿಹಾಸವಿರುವ ಧರ್ಮಸಭೆಗೆ 100 ವರ್ಷಗಳು ಏನೇನು ಅಲ್ಲ. ಆದರೆ ಎಷ್ಟೋನಿಯಾ ಪ್ರಕರಣದಲ್ಲಿ ಅದೊಂದು ಅತ್ಯಂತ ಸವಾಲಿನ ಯುಗ."
ಈ ಮೇಲಿನ ಹೇಳಿಕೆಯನ್ನು ಎಸ್ಟೋನಿಯ ಧರ್ಮ ಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಬಿಷಪ್ ಫಿಲಿಪೆ ಜೋರ್ಡನ್ ಅವರು ವ್ಯಾಟಿಕನ್ ನ್ಯೂಸ್ ವಾಹಿನಿಗೆ ಸಂದರ್ಶನವನ್ನು ನೀಡುತ್ತಾ ಹೇಳಿದರು. ಈ ವರ್ಷ ಈ ಸ್ಥಳೀಯ ಧರ್ಮ ಸಭೆಯು ತನ್ನ ಸ್ಥಾಪನೆಯ ನೂರು ವರ್ಷಗಳನ್ನು ಪೂರೈಸುತ್ತಿದೆ.
ನವೆಂಬರ್ 1, 1924ರಲ್ಲಿ ಪೋಪ್ 11ನೇ ಭಕ್ತಿನಾಥರು ಲಾಟ್ವಿಯಾ ಪ್ರದೇಶದಿಂದ ಇದನ್ನು ಬೇರ್ಪಡಿಸಿ, ಇದನ್ನು ಒಂದು ಪ್ರೆಷಿತ ಆಡಳಿತಾಧಿಕಾರವಾಗಿ ರೂಪಿಸಿದರು.
1918ರಲ್ಲಿ ಎಷ್ಟೋನಿಯ ಸೋವಿಯತ್ ಆಡಳಿತದ ತೆಕ್ಕೆಯಲ್ಲಿತ್ತು. ಇಲ್ಲಿ ಸೋವಿಯತ್ ಆಡಳಿತ ಇರುವ ತನಕವೂ ಸಹ ಕ್ರೈಸ್ತರಿಗೆ ಅನೇಕ ಕಟ್ಟುಪಾಡುಗಳು ಹಾಗೂ ಹಿಂಸಾತ್ಮಕ ಆಚರಣೆಗಳು ಇದ್ದವು. ಸ್ವತಂತ್ರವಾಗಿ ತಮ್ಮ ಧರ್ಮವನ್ನು ಆಚರಿಸಲು ಇಲ್ಲಿ ಕ್ರೈಸ್ತರಿಗೆ ಅವಕಾಶವಿರಲಿಲ್ಲ. ಸೋವಿಯತ್ ಹಿಡಿತದಿಂದ ಇದು ಸ್ವತಂತ್ರವಾದ ನಂತರ, ಇಲ್ಲಿ ಅನೇಕ ಶತಮಾನಗಳಿಂದ ಕಥೋಲಿಕ ಕ್ರೈಸ್ತರು ಇದ್ದರೂ ಸಹ, ಎಷ್ಟೋನಿಯ ಸ್ವತಂತ್ರ ಧರ್ಮಕ್ಷೇತ್ರವಾಗಲು ಬಯಸಿತು.
ನವೆಂಬರ್ 2, 2024 ರಿಂದ ಒಂದು ವಾರಗಳ ಕಾಲ ಶತಕ ಸಂಭ್ರಮವನ್ನು ಆಚರಿಸಲು ಎಷ್ಟೋನಿಯ ಧರ್ಮಕ್ಷೇತ್ರವು ಅನೇಕ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿಕೊಂಡಿದೆ.