ಹುಡುಕಿ

ಕಾಂಗೋ ದೇಶದ ಮಕ್ಕಳ ಬೆಂಬಲಕ್ಕಾಗಿ ಯೋಜನೆಯನ್ನು ಅರಂಭಿಸಿ ಜೆಸುಯಿಟ್ ರೆಫ್ಯೂಜಿ ಸರ್ವಿಸ್

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್'ಸಿ) ದೇಶದಲ್ಲಿನ ಮಕ್ಕಳ ಅಭ್ಯುದಯ ಹಾಗೂ ಬೆಂಬಲಕ್ಕಾಗಿ ಯೇಸುಸಭೆಯ ನಿರಾಶ್ರಿತರ ಸೇವಾ ಸಂಸ್ಥೆಯಾದ ಜೆಸುಯಿಟ್ ರೆಫ್ಯೂಜಿ ಸರ್ವಿಸ್ (ಜೆಆರ್'ಎಸ್) ಹೊಸ ಮಾನವೀಯ ಯೋಜನೆಗಳನ್ನು ಆರಂಭಿಸಲಿದೆ.

ವರದಿ: ಸಿಸ್ಟರ್ ಕಟ್ಲೆಹೋ ಕಾಂಗ್, ಎಸ್ ಎನ್ ಜೆ ಎಂ., ಅಜಯ್ ಕುಮಾರ್

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್'ಸಿ) ದೇಶದಲ್ಲಿನ ಮಕ್ಕಳ ಅಭ್ಯುದಯ ಹಾಗೂ ಬೆಂಬಲಕ್ಕಾಗಿ ಯೇಸುಸಭೆಯ ನಿರಾಶ್ರಿತರ ಸೇವಾ ಸಂಸ್ಥೆಯಾದ ಜೆಸುಯಿಟ್ ರೆಫ್ಯೂಜಿ ಸರ್ವಿಸ್ (ಜೆಆರ್'ಎಸ್) ಹೊಸ ಮಾನವೀಯ ಯೋಜನೆಗಳನ್ನು ಆರಂಭಿಸಲಿದೆ. 

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಕಚೇರಿಯ ಪ್ರಕಾರ ೨೦೨೩ ರಲ್ಲಿ ಕಾಂಗೋ ದೇಶದಲ್ಲಿ ಹಿಂಸೆ ಉಲ್ಬಣವಾದ ಬಳಿಕ ಸುಮಾರು ೧ ಮಿಲಿಯನ್ ಜನರು ನಿರಾಶ್ರಿತರಾಗಿದ್ದಾರೆ. ಇಲ್ಲಿನ ಜನರು ಶಸ್ತ್ರಸಜ್ಜಿತ ಭಯೋತ್ಪಾದಕರ ಹಿಂಸೆ ಹಾಗೂ ದಾಳಿಯಿಂದ ಬಳಲುತ್ತಿದ್ದು, ದಿನೇ ದಿನೇ ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ಇದರಿಂದ ಇಲ್ಲಿನ ಮಕ್ಕಳು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಕಡ್ಡಾಯ ಶಿಕ್ಷಣದ ಗುರಿಯನ್ನು ಹೊಂದಿರುವ ಜೆಸುಯಿಟ್ ರೆಫ್ಯೂಜಿ ಸರ್ವಿಸ್ ಇಲ್ಲಿನ ಮಕ್ಕಳ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿದ್ದು, ಆ ಕುರಿತು ಮಾನವೀಯ ನೆರವು ಕಾರ್ಯಗಳನ್ನು ಆರಂಭಿಸುತ್ತಿದೆ ಎಂದು ವರದಿಯಾಗಿದೆ.

ಇದರ ಜೊತೆಗೆ ಮಕ್ಕಳ ಸುರಕ್ಷತಾ ಕಾರ್ಯಕ್ರಮಗಳನ್ನೂ ಸಹ ಯೇಸು ಸಭೆಯ ನಿರಾಶ್ರಿತರ ಸೇವಾ ಯೋಜನೆಯು ಒಳಗೊಂಡಿದೆ.  

25 June 2024, 19:00