ಪೋಲ್ಯಾಂಡ್: ಕಾರ್ಪಸ್ ಕ್ರಿಸ್ತಿ ಆರಾಧನಾ ಸಂಗೀತ ಸಂಜೆಗೆ ಸೇರಿದ ಜನಸಾಗರ

ಪೋಲ್ಯಾಂಡ್ ದೇಶದಾದ್ಯಂತ ಕಾರ್ಪಸ್ ಕ್ರಿಸ್ತಿ ಹಬ್ಬದ ಹಿನ್ನೆಲೆ ಆಯೋಜಿಸಲಾಗಿರುವ ಸಂಗೀತ ಸಂಜೆಗಳಿಗೆ ಸುಮಾರು ೨೫೦೦೦ ಹೆಚ್ಚು ಜನರು ಬಂದು ಸೇರಿರುವುದು ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದೆ.

ವರದಿ: ಫಾದರ್ ಪವೆಲ್ ರೈಟೆಲ್-ಆಂದ್ರಿಯಾನಿಕ್, ಫಾದರ್ ಜಾಕುಬ್ ನಾಗಿ, ಅಜಯ್ ಕುಮಾರ್

ಗುರುವಾರ ನಡೆದ ಕಾರ್ಪಸ್ ಕ್ರಿಸ್ತಿ ಹಬ್ಬದ ಹಿನ್ನೆಲೆ ಆಯೋಜಿಸಲಾಗಿದ್ದ ಕ್ರೈಸ್ತ ಸಂಗೀತ ಸಂಜೆಗೆ ಪೋಲ್ಯಾಂಡ್ ಸೇರಿದಂತೆ ವಿವಿಧ ಯೂರೋಪ್ ದೇಶಗಳಿಂದ ೨೫,೦೦೦ ಕ್ಕೂ ಹೆಚ್ಚು ಜನರು ಬಂದು ಸೇರಿದ್ದಾರೆ.

"ಒನ್ ಹಾರ್ಟ್ ಒನ್ ಸ್ಪಿರಿಟ್ ಎಂಬ ಈ ಕಾರ್ಯಕ್ರಮವು ಒಂದು ರೀತಿಯ ಪ್ರಾರ್ಥನೆಯಾಗಿದ್ದು, ಯೇಸುಕ್ರಿಸ್ತರು ಇದರ ಕೇಂದ್ರ ಬಿಂದುವಾಗಿದ್ದಾರೆ. ಇಲ್ಲಿ ರೇಡಿಯೋ, ಟಿವಿ ಹಾಗೂ ಆನ್ಲೈನ್ ಮೂಲಕ ಒಟ್ಟಾಗಿ ದೇವರನ್ನು ಆರಾಧಿಸಲಾಗುತ್ತದೆ" ಎಂದು ಆಯೋಜಕರು ಹೇಳುತ್ತಾರೆ.

ಇದರಲ್ಲಿ ಭಾಗವಹಿಸಿದವರೆಲ್ಲರೂ ದೇವರ ಹಾಡುಗಳನ್ನು ಸುಮಾರು ಮೂರು ಗಂಟೆಗಳ ಕಾಲ ಆನಂದಿಸಿದ್ದಾರೆ.

ಕೊನೆಯಲ್ಲಿ ಜೆಸೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಜಾನ್ ವಾತ್ರೋಬಾ ಅವರು ಆಶಿರ್ವಾದವನ್ನು ನೀಡಿದರು.

01 June 2024, 16:49