ಹುಡುಕಿ

ಸಾರ್ವಜನಿಕ ಭೇಟಿಯಲ್ಲಿ ಪೋಪ್: ಮಾದಕ ವಸ್ತುಗಳ ಉತ್ಪಾದನೆಯನ್ನು ನಿಲ್ಲಿಸುವುದು ನೈತಿಕ ಕರ್ತವ್ಯವಾಗಿದೆ

ಅಂತರಾಷ್ಟ್ರೀಯ ಮಾದಕ ವಸ್ತು ದೌರ್ಜನ್ಯ ದಿನಾಚರಣೆ ಎಂದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಯಾವುದೇ ರೀತಿಯ ಮಾತುಕ ವಸ್ತುಗಳ ಉತ್ಪಾದನೆಯನ್ನು ನಿಲ್ಲಿಸುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ ಎಂದು ಸಾರ್ವಜನಿಕ ಭೇಟಿಯಲ್ಲಿ ಹೇಳಿದರು.

ವರದಿ: ಡೆಬೋರಾ ಕ್ಯಾಸ್ಟಲೀನೋ ಲೂಬೊವ್, ಅಜಯ್ ಕುಮಾರ್

"ಮಾದಕ ವಸ್ತುಗಳ ಸೇವನೆಯಿಂದ ನೂರಾರು ಜನರು ತಮ್ಮ ಕುಟುಂಬಗಳನ್ನು ಹಾಗೂ ಬದುಕನ್ನು ಕಳೆದುಕೊಂಡಿದ್ದಾರೆ. ಇಂತಹ ಹಲವಾರು ಕಥೆಗಳನ್ನು ಕೇಳಿದ ನಂತರ ಮಾದಕ ವಸ್ತುಗಳು ಹಾಗೂ ಅವುಗಳ ಉತ್ಪಾದನೆಯನ್ನು ತಡೆಯುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ" ಎಂದು ವಿಶ್ವಗುರು ಫ್ರಾನ್ಸಿಸ್ ಅದ್ಭುತ ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಹೇಳಿದರು.

ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಮಾದಕ ವಸ್ತುಗಳ ಸೇವನೆ ಸಮುದಾಯಗಳನ್ನು ಹಾಗೂ ವ್ಯಕ್ತಿಗಳನ್ನು ಬಡವರನ್ನಾಗಿಸಿ, ಅವರ ಬದುಕಿನ ಘನತೆಯನ್ನು ಹಾಳು ಮಾಡಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಈ ಸಮಸ್ಯೆಯನ್ನು ನಾವೆಲ್ಲರೂ ಉಲ್ಬಣವಾದ ಮೇಲೆ ಮಾತ್ರವಲ್ಲ, ಅದಕ್ಕೂ ಮುಂಚಿತವಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಇದನ್ನು ತಡೆಗಟ್ಟಲು ಪ್ರಯತ್ನಿಸ ಬೇಕಿದೆ. ಈ ಕುರಿತು ನಮ್ಮ ಯುವ ಸಮುದಾಯಕ್ಕೆ ಅರಿವನ್ನು ಮೂಡಿಸಿ, ಇದರ ಸಮಸ್ಯೆಗಳನ್ನು ಅವರಿಗೆ ಮನದಟ್ಟು ಮಾಡಬೇಕಿದೆ ಎಂದು ಅವರು ಹೇಳಿದರು.

26 June 2024, 18:56