ಹುಡುಕಿ

ಸಿಯೋಲ್ ಮಹಾಧರ್ಮಾಧ್ಯಕ್ಷ ಸೂನ್ ಟೆಕ್ ಸಿಯೋಲ್ ಮಹಾಧರ್ಮಾಧ್ಯಕ್ಷ ಸೂನ್ ಟೆಕ್  

ದ್ವೇಷ ಪರಂಪರೆಯನ್ನು ಕೈಬಿಡುವಂತೆ ಕೊರಿಯನ್ನರಿಗೆ ಕರೆ ನೀಡಿದ ಸಿಯೋಲ್ ಮಹಾಧರ್ಮಾಧ್ಯಕ್ಷರು

ಸಿಯೋಲ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಜುಂಗ್ ಸೂನ್ ಟೆಕ್ ಅವರು ದ್ವೇಷದ ಪರಂಪರೆಯನ್ನು ಕೈಬಿಡುವಂತೆ ಕೊರಿಯನ್ನರಿಗೆ ಕರೆ ನೀಡಿದ್ದಾರೆ.

ವರದಿ: ಲಿಕಾಸ್ ನ್ಯೂಸ್

"ನಮ್ಮನ ಸನ್ನಿವೇಷಗಳು ಕತ್ತಲೆಯಿಂದ ಕೂಡಿದ್ದರೂ ಸಹ, ಹೊಸ ಸಂಬಂಧಗಳನ್ನು ಕಟ್ಟಲು ನಮಗೆ ಬದ್ಧತೆ ಇರಬೇಕು" ಎಂದು ಸಿಯೋಲ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಜುಂಗ್ ಸೂನ್ ಟೆಕ್ ಅವರು ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ದೇಶಗಳ ಸಂಬಂಧದ ಕುರಿತು ಪ್ರಸ್ತಾಪಿಸುತ್ತಾ ಹೇಳಿದ್ದಾರೆ.

ರಾಷ್ಟ್ರೀಯ ಸಂಧಾನ ಹಾಗೂ ಐಕ್ಯತೆಯ ದಿನಾಚರಣೆಯ ಪ್ರಯುಕ್ತ ಮೈಯೊನ್'ಡಾಂಗ್ ಪ್ರಧಾನಾಲಯದಲ್ಲಿ ಬಲಿಪೂಜೆಯನ್ನರ್ಪಿಸುತ್ತಾ ಮಾತನಾಡಿದ ಮಹಾಧರ್ಮಾಧ್ಯಕ್ಷ ಸೂಕ್ ಟೆಕ್ ಅವರು "ಬಡತನ ಹಾಗೂ ಸರ್ವಾಧಿಕಾರವನ್ನು ನಾವು ಭರವಸೆಯಿಂದ ಎದುರಿಸುವಂತೆ, ವಿಭಜನೆಯನ್ನೂ ಸಹ ನಾವು ಇದೇ ಭರವಸೆಯಿಂದ ಎದುರಿಸಬೇಕು. ಈ ಭರವಸೆ ಅವಿಭಜಿತ ಕೊರಿಯಾಕ್ಕೆ ಶಾಂತಿಯನ್ನು ತರುತ್ತದೆ." ಎಂದು ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು "ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು" ಎಂಬ ದ್ವೇಷದ ಹಾಗೂ ಪ್ರತೀಕಾರದ ತತ್ವವನ್ನು ಟೀಕಿಸಿದರು. ಶಾಂತಿಯನ್ನು ಸಂವಾದದ ಮೂಲಕ ಮಾತ್ರವೇ ಪಡೆಯಬಹುದಾಗಿದೆ ಎಂದು ಹೇಳಿದರು. "ದ್ವೇಷ ಪರಂಪರೆಯನ್ನು ಕೈಬಿಟ್ಟು, ಅವಿಭಜಿತ ಕೊರಿಯಾ ದೇಶದ ನಾಗರೀಕರಾಗಿ ನಾವು ಶಾಂತಿಯಿಂದ ಜೀವಿಸಲು ಪ್ರಾರ್ಥಿಸೋಣ" ಎಂದು ಅವರು ಹೇಳಿದರು.   

27 June 2024, 15:03