ಹುಡುಕಿ

ವೆನೆಜುಲಾ ಗಡಿಯಲ್ಲಿ ವಲಸಿಗರಿಗೆ ಧರ್ಮಸಭೆ ಇನ್ನೂ ಭರವಸೆಯನ್ನು ನೀಡುತ್ತಿದೆ

ಹಿಂಸೆ ಅಥವಾ ಬಡತನದ ಕಾರಣಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ವೆನೆಜುಲಾದ ವಲಸಿಗರಿಗಾಗಿ ಧರ್ಮಸಭೆಯು ನೆರವಿನ ಹಸ್ತವನ್ನು ನೀಡುತ್ತಾ ಅವರಿಗೆ ಭರವಸೆಯನ್ನು ನೀಡುವ ಕೆಲಸವನ್ನು ಮಾಡುತ್ತಿದೆ.

ವರದಿ: ಸಿಸ್ಟರ್ ಕಟ್ಲೇಹೋ ಕಾಂಗ್, ಎಸ್.ಎನ್.ಜೆ.ಎಂ., ಅಜಯ್ ಕುಮಾರ್


ವಲಸೆಯ ಕಾರಣದಿಂದಾಗಿ ಉಂಟಾಗುತ್ತಿರುವ ಮಾನವರ ಚಲನೆಯು ಇಪ್ಪತ್ತೊಂದನೇ ಶತಮಾನದ ಅತ್ಯಂತ ಪ್ರಮುಖ'.್:ಚ ? .,ಚವಷ;ವ'್ವಚ; ಸಮಸ್ಯೆಗಳಲ್ಲಿ ಒಂದಾಗಿದೆ. ವೆನೆಜುಲಾ ದೇಶದಲ್ಲಿ ಹಿಂಸೆ ಅಥವಾ ಬಡತನದ ಕಾರಣದಿಂದ ವಲಸೆ ಹೋಗುತ್ತಿರುವ ಸಂಖ್ಯೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪ್ರಮುಖ ಸಮಸ್ಯೆಯು ಜೀವಂತವೆನಿಸುತ್ತದೆ. ಉತ್ತಮ ಜೀವನವನ್ನು ಅರಸಿ ಈ ದೇಶದಿಂದ ಸಾವಿರಾರು ಜನರು ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೆ.

ಅಂತರಾಷ್ಟ್ರೀಯ ವಲಸಿಗ ಸಂಸ್ಥೆಯ ವರದಿಯ ಪ್ರಕಾರ ಉತ್ತಮ ಜೀವನವನ್ನು ಅರಸಿ ವಿದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಕಳೆದ ಐವತ್ತು ವರ್ಷಗಳಲ್ಲಿ ಅತ್ಯಂತ ಏರಿಕೆ ಕಂಡಿದೆ. ಇದು ಕುಟುಂಬಗಳಿಗೆ ಹಾಗೂ ಸಮುದಾಯಗಳ ಮೇಲೆ ಪರಿಣಾಮವನ್ನು ಬೀರಿದ್ದು, ಇದರಿಂದ ನಿರುದ್ಯೋಗ, ಹಸಿವು ಮುಂತಾದ ಸೂಚ್ಯಂಕಗಳಲ್ಲಿ ಏರಿಕೆಯಾಗಿದೆ.

ವಿಶ್ವದಲ್ಲೇ ಅತ್ಯಂತ ಹೆಚ್ಚಿನ ವಲಸಿಗ ಸಮಸ್ಯೆಯನ್ನು ಎದುರಿಸುತ್ತಿರುವ ದೇಶಗಳಲ್ಲಿ ವೆನೆಜುಲಾ ದೇಶವೂ ಸಹ ಒಂದಾಗಿದೆ. 

ವಲಸಿಗರಿಗೆ ಹಾಗೂ ವಲಸೆ ಹೋಗುವ ಜನರಿಗೆ ಸಹಾಯಸ್ತವನ್ನು ಚಾಚುವ ನಿಟ್ಟಿನಲ್ಲಿ ಧರ್ಮಸಭೆ ಎಂದಿಗೂ ಹಿಂದೆ ಬಿದ್ದಿಲ್ಲ. ವಲಸಿಗರಿಗೆ ಕಾನೂನು ನೆರವು, ಪೌಷ್ಟಿಕತೆ, ಹಾಗೂ ಮಕ್ಕಳ ಆರೈಕೆಯ ನಿಟ್ಟಿನಲ್ಲಿ ಧರ್ಮಸಭೆ ಎಂದಿಗೂ ಸಹ ತನ್ನ ನೆರವನ್ನು ನೀಡುತ್ತಲೇ ಇದೆ. ಇದರ ಜೊತೆಗೆ ಧರ್ಮಸಭೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳೂ ಸಹ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಲಸಿಗರಿಗೆ ಹಾಗೂ ಅವರ ಮಕ್ಕಳಿಗೆ ನೀಡುತ್ತಲಿದೆ. 

ವಿವಿಧ ಧರ್ಮಕೇಂದ್ರಗಳಲ್ಲಿರುವ ಕಾರಿತಾಸ್ ಸಂಸ್ಥೆಯ ನೆರವಿನಿಂದ ಸೂಕ್ತ ಕಾಲಕ್ಕೆ ವಲಸಿಗರ ಅವಶ್ಯಕತೆಗಳಿಗೆ ಧರ್ಮಸಭೆಯು ಸ್ಪಂದಿಸುತ್ತಲೇ ಇದೆ

18 June 2024, 17:06