ಹುಡುಕಿ

ಉಕ್ರೇನ್: ಇಬ್ಬರು ಗುರುಗಳ ಬಿಡುಗಡೆಗೆ ನೆರವಾದ ಪವಿತ್ರ ಪೀಠಕ್ಕೆ ಧನ್ಯವಾದ ತಿಳಿಸಿದ ಝೆಲೆನ್ಸ್ಕಿ

ಉಕ್ರೇನ್ ದೇಶದ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹಾಗೂ ಉಕ್ರೇನಿಯನ್ ಗ್ರೀಕ್ ಕ್ಯಾಥೊಲಿಕ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷ ಸ್ವ್ಯಾಟೋಸ್ಲಾವ್ ಶೆವ್ಚುಕ್ ಅವರು ರಷ್ಯಾ ದೇಶದಿಂದ ಯುದ್ಧ ಖೈದಿಗಳಾಗಿ ಬಿಡುಗಡೆಗೊಂಡ ಹತ್ತು ಜನರಿಗಾಗಿ, ವಿಶೇಷವಾಗಿ ಇಬ್ಬರು ಗುರುಗಳಿಗಾಗಿ ಪವಿತ್ರ ಪೀಠ ಹಾಗೂ ಪೋಪ್ ಫ್ರಾನ್ಸಿಸ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ: ಅಮೇನಿಯೋ ಲೊಮೆನಾಕೋ, ಅಜಯ್ ಕುಮಾರ್

ಉಕ್ರೇನ್ ದೇಶದ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹಾಗೂ ಉಕ್ರೇನಿಯನ್ ಗ್ರೀಕ್ ಕ್ಯಾಥೊಲಿಕ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷ ಸ್ವ್ಯಾಟೋಸ್ಲಾವ್ ಶೆವ್ಚುಕ್ ಅವರು ರಷ್ಯಾ ದೇಶದಿಂದ ಯುದ್ಧ ಖೈದಿಗಳಾಗಿ ಬಿಡುಗಡೆಗೊಂಡ ಹತ್ತು ಜನರಿಗಾಗಿ, ವಿಶೇಷವಾಗಿ ಇಬ್ಬರು ಗುರುಗಳಿಗಾಗಿ ಪವಿತ್ರ ಪೀಠ ಹಾಗೂ ಪೋಪ್ ಫ್ರಾನ್ಸಿಸ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.    

ಈ ಇಬ್ಬರು ರಕ್ಷಕರ ಸಭೆಯ (ರೆಡೆಂಪ್ಟೊರಿಸ್ಟ್) ಗುರುಗಳು ಬಂಧನಕ್ಕೂ ಮುಂಚಿತವಾಗಿ ರಷ್ಯಾ ಆಕ್ರಮಿತ ಪ್ರದೇಶದಲ್ಲಿ ನೆಲೆಸಿದ್ದರು. ಇದೀಗ ಇವರ ಬಿಡುಗಡೆಗೆ ಅಲ್ಲಿನ ಸ್ಥಳೀಯ ಮಹಾಧರ್ಮಾಧ್ಯಕ್ಷರು ಸಂತಸವನ್ನು ವ್ಯಕ್ತಪಡಿಸಿದ್ದು, ಪೋಪ್ ಫ್ರಾನ್ಸಿಸ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಯುದ್ಧ ಕೈದಿಗಳ ಬಿಡುಗಡೆಯ ನಿಟ್ಟಿನಲ್ಲಿ ಉಕ್ರೇನ್ ದೇಶದೊಂದಿಗೆ ಸರ್ವರೀತಿಯ ಪ್ರಯತ್ನವನ್ನು ನಡೆಸಿದ ವ್ಯಾಟಿಕನ್ ಪವಿತ್ರ ಪೀಠಕ್ಕೆ ಹಾಗೂ ಪೋಪ್ ಫ್ರಾನ್ಸಿಸ್ ಅವರಿಗೆ ಉಕ್ರೇನ್ ಅಧ್ಯಕ್ಷರು ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.   

29 June 2024, 15:25