ಲೈಂಗಿಕ ದೌರ್ಜನ್ಯದ ಸುಳಿಯಲ್ಲಿ ಎಮ್ಮಾವುಸ್ ಸ್ಥಾಪಕ ಅಬ್ಬೇ ಪಿಯೆರ್ರೆ
ವರದಿ: ಲೀಸಾ ಝೆಂಗಾರಿನಿ, ಮಾರಿ ದುಹಾಮೆಲ್, ಅಜಯ್ ಕುಮಾರ್
ಫ್ರಾನ್ಸ್ ದೇಶದ ಎಮ್ಮಾವುಸ್ ಎಂಬ ಕಥೋಲಿಕ ಚಳುವಳಿಯ ಸ್ಥಾಪಕ, ಪ್ರಸಿದ್ಧ ಸಾಮಾಜಿಕ ಸೇವಾಕರ್ತ ಅಬ್ಬೆ ಪಿಯೆರ್ರೆ ಅವರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹಾಗೂ ಆರೋಪಗಳು ಕೇಳಿ ಬಂದಿವೆ. ಅಬ್ಬೆ ಅವರು ಫ್ರಾನ್ಸ್ ದೇಶದಲ್ಲಿನ ಸಾವಿರಾರು ನಿರಾಶ್ರಿತರು ಹಾಗೂ ದಿಕ್ಕಿಲ್ಲದವರಿಗೆ ನೆರವು ಹಾಗೂ ಆಶ್ರಯವನ್ನು ನೀಡಿದ್ದಾರೆ. ಈ ಮೂಲಕ ಅವರು ಫ್ರಾನ್ಸ್ ದೇಶದ ಸುಪ್ರಸಿದ್ಧ ವ್ಯಕ್ತಿಗಳಲ್ಲೊಬ್ಬರಾಗಿದ್ದು, ಇದೀಗ ಅವರ ನಿಧನದ ನಂತರ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿವೆ.
ಈ ಕುರಿತು ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ತನಿಖಾ ಸಂಸ್ಥೆಯೊಂದು ಹಲವು ಸಂತ್ರಸ‌್ಥರನ್ನು ಸಂದರ್ಶಿಸಿ, ಮಾಹಿತಿಯನ್ನು ಪಡೆದುಕೊಂಡ ನಂತರ ಈ ವರದಿಯನ್ನು ಪ್ರಕಟಿಸಿದೆ. ಈ ವರದಿ ಪ್ರಕಟವಾದ ಬೆನ್ನಲ್ಲೇ ಇದು ಫ್ರಾನ್ಸ್ ಜನತೆಗೆ ಅನಿರೀಕ್ಷಿತ ಸುದ್ದಿಯಂತೆ ಬಂದಿದೆ.
ಈ ವರದಿಯ ಆಗಮನದ ಬೆನ್ನಲ್ಲೇ ಪತ್ರಿಕಾ ಹೇಳಿಕೆಯನ್ನು ನೀಡಿರುವ ಫ್ರಾನ್ಸ್ ದೇಶದ ಧರ್ಮಾಧ್ಯಕ್ಷ ಮಂಡಳಿಯು ಸಂತ್ರಸ‌್ತರ ಪರವಾಗಿ ನಿಂತಿದ್ದು, ಅವರಿಗಾಗಿ ಹೋರಾಡುವ ಹಾಗೂ ಬೆಂಬಲ ನೀಡುವ ಮಾತುಗಳನ್ನಾಡಿದೆ.