ಸರ್ವರ ಘನತೆಯನ್ನು ಒತ್ತಿಹೇಳುವ ಮೂಲಕ ರಾಜಕೀಯ ಹಿಂಸೆಗೆ ಪ್ರತಿಕ್ರಿಯಿಸಬೇಕು: ಆರ್ಚ್'ಬಿಷಪ್ ಗುಡ್ಝಿಯಾಕ್
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಆರ್ಚ್'ಎಪಾರ್ಕಿ ಆಫ್ ಫಿಲಾಡೆಲ್ಫಿಯಾದ ಮೆಟ್ರೊಪಾಲಿಟನ್ ಆರ್ಚ್'ಬಿಷಪ್ ಆಗಿರುವ ಮಹಾಧರ್ಮಾಧ್ಯಕ್ಷ ಬೋರಿಸ್ ಗುಡ್ಝಿಯಾಕ್ ಅವರು ಅಮೇರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಅವರ ಮೇಲೆ ನಡೆದ ಹತ್ಯೆಯ ದಾಳಿಯನ್ನು ಖಂಡಿಸುತ್ತಾ, ಯಾವುದೇ ರಾಜಕೀಯ ದಾಳಿಗೆ ನಮ್ಮ ಪ್ರತಿಕ್ರಿಯೆ ಸರ್ವರ ಮಾನವ ಘನತೆಯನ್ನು ಎತ್ತಿಹಿಡಿಯುವುದಾಗಿದೆ ಎಂದು ಹೇಳಿದ್ದಾರೆ.
ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ನ್ಯಾಯ ಹಾಗೂ ಮಾನವ ಅಭಿವೃದ್ಧಿ ಆಯೋಗದ ಅಧ್ಯಕ್ಷರಾಗಿರುವ ಆರ್ಚ್'ಬಿಷಪ್ ಗುಡ್ಝಿಯಾಕ್ ಅವರು ರಾಜಕೀಯ ಅಥವಾ ಸೈದ್ಧಾಂತಿಕ ಸಂಘರ್ಷಗಳನ್ನು ನಿರ್ವಹಿಸಲು ದೈಹಿಕ ಹಾಗೂ ಮಾನಸಿಕ ಹಿಂಸೆಯು ಒಂದು ಕ್ರಮವಾಗಿದೆ ಎಂದು ಈಗಿನ ಕಾಲಘಟ್ಟದ ಯುವ ಸಮೂಹವು ಒಪ್ಪಿಕೊಂಡಿದೆ. ಇದರಿಂದಾಗಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ" ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು "ಕ್ರೈಸ್ತರಾದವರು ಈ ರೀತಿಯ ಯಾವುದೇ ಕ್ರಮಗಳಿಗೆ ತುತ್ತಾಗದೆ ಮಾನವ ಘನತೆಯನ್ನು ಉತ್ತೇಜಿಸಬೇಕು ಹಾಗೂ ಸಂಘರ್ಷಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು" ಎಂದು ಹೇಳಿದ್ದಾರೆ. ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ಮೇಲೆ ನಡೆದ ಹತ್ಯೆಯ ದಾಳಿಯ ಹಿನ್ನೆಲೆ ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ನ್ಯಾಯ ಹಾಗೂ ಮಾನವ ಅಭಿವೃದ್ಧಿ ಆಯೋಗವು ಪತ್ರಿಕಾ ಪ್ರಕಟನೆಯನ್ನು ಬಿಡುಗಡೆ ಮಾಡಿದೆ.