"ಕಮ್ಯೂನಿಯೋ" ಸಂಸ್ಥೆಯ ಸೇವಾಭಾವವನ್ನು ಶ್ಲಾಘಿಸಿದ ಕಾರ್ಡಿನಲ್ ಫಿಲಿಪ್ ನೇರಿ ಫೆರ್ರಾವೋ
ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ (ಸಿಸಿಬಿಐ) ಅಧ್ಯಕ್ಷರೂ ಹಾಗೂ ಗೋವಾ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರೂ ಆಗಿರುವ ಕಾರ್ಡಿನಲ್ ಫಿಲಿಪ್ ನೇರಿ ಫೆರ್ರಾವೋ ಅವರು ಸಿಸಿಬಿಐ ದಾನ-ಧರ್ಮ ಸಂಸ್ಥೆಯಾದ "ಕಮ್ಯೂನಿಯೋ" ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ್ದಾರೆ.
ವರದಿ: ಲಿಕಾಸ್ ನ್ಯೂಸ್

ಕಮ್ಯೂನಿಯೋ ಎಂಬುದು ಒಂದು ಸಂಸ್ಥೆಯಾಗಿ ಧರ್ಮಸಭೆಯ ಸೇವಾ ಮನೋಭಾವ ಹಾಗೂ ಐಕ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ಕಾರ್ಡಿನಲ್ ಫೆರಾವೊ ಅವರು ಹೇಳಿದರು. ಗುಜರಾತಿನ ಫೇತ್'ಪುರ ಎಂಬಲ್ಲಿ ಕಮ್ಯೂನಿಯೋ ವರದಿಯನ್ನು ಬಿಡುಗಡೆ ಮಾಡುತ್ತಾ, ಅವರು ಮಾತನಾಡಿದರು.
೨೦೧೭ ರಲ್ಲಿ ಭಾರತದ ಸುವಾರ್ತಾ ಪ್ರಸಾರ ಕೇಂದ್ರ ಅಥವಾ ಆರ್ಥಿಕವಾಗಿ ಹಿಂದುಳಿದ ಧರ್ಮಕ್ಷೇತ್ರಗಳಿಗೆ ನೆರವನ್ನು ನೀಡುವ ನಿಟ್ಟಿನಲ್ಲಿ ಇದನ್ನು ಸ್ಥಾಪಿಸಿದ್ದು, ಇದು ಸಿಸಿಬಿಐ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಉದ್ದೇಶ ಸುಮಾರು ೨೫೦ ಯೋಜನೆಗಳ ಮೂಲಕ ಬಡ ಸಮುದಾಯಗಳನ್ನು ಮೇಲೆತ್ತುವುದಾಗಿದ್ದು, ಪ್ರಸ್ತುತ ೧೦೦ ಯೋಜನೆಗಳ ಕಾರ್ಯ ಪ್ರಗತಿಯಲ್ಲಿದೆ.
11 July 2024, 17:37