ಹುಡುಕಿ

ಇಂಡಿಯಾ: ಮಧ್ಯಪ್ರದೇಶದ ಕ್ರೈಸ್ತ ಕುಟುಂಬಗಳಲ್ಲಿ ಬೈಬಲ್ ಪ್ರಾರ್ಥನೆ

ಉತ್ತರ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿ ಕ್ರೈಸ್ತ ಕುಟುಂಬಗಳಲ್ಲಿ ವಿಶ್ವಾಸ ಜೀವಂತವಾಗಿದೆ. ಪ್ರತಿ ದಿನ ಕುಟುಂಬಗಳಲ್ಲಿ ಮಾಡುವ ಬೈಬಲ್ ಪ್ರಾರ್ಥನೆಯು ಇಂದೋರ್ ಧರ್ಮಕ್ಷೇತ್ರದಲ್ಲಿ ಹೊಸತನವನ್ನು ಸೃಷ್ಟಿಸಿದೆ. ಸಿಸ್ಟರ್ ರೀಟಾ ಜಾರ್ಜ್ ಥೈಕೂಟಮ್ ಅವರು ಈ ಕುರಿತು ತಮ್ಮ ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ವರದಿ: ಸಿಸ್ಟರ್ ರೀಟಾ ಜಾರ್ಜ್ ಥೈಕೂಟಮ್, ಪಿ ಎಚ್ ಜೆ ಸಿ, ಅಜಯ್ ಕುಮಾರ್

ಉತ್ತರ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿ ಕ್ರೈಸ್ತ ಕುಟುಂಬಗಳಲ್ಲಿ ವಿಶ್ವಾಸ ಜೀವಂತವಾಗಿದೆ. ಪ್ರತಿ ದಿನ ಕುಟುಂಬಗಳಲ್ಲಿ ಮಾಡುವ ಬೈಬಲ್ ಪ್ರಾರ್ಥನೆಯು ಇಂದೋರ್ ಧರ್ಮಕ್ಷೇತ್ರದಲ್ಲಿ ಹೊಸತನವನ್ನು ಸೃಷ್ಟಿಸಿದೆ. ಸಿಸ್ಟರ್ ರೀಟಾ ಜಾರ್ಜ್ ಥೈಕೂಟಮ್ ಅವರು ಈ ಕುರಿತು ತಮ್ಮ ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಆರಂಭದಲ್ಲಿ ಧಾರ್ ಧರ್ಮಕೇಂದ್ರದ ಭಕ್ತಾಧಿಗಳು ಸಮುದಾಯ ಪ್ರಾರ್ಥನೆಯನ್ನು ಪಿ ಎಚ್ ಜೆ ಸಿ ಸಿಸ್ಟರುಗಳ ಜೊತೆಗೂಡಿ ದೇವಾಲಯದಲ್ಲಿ ಪ್ರಾರ್ಥಿಸುತ್ತಿದ್ದರು. ಈ ಪ್ರಾರ್ಥನೆಯಲ್ಲಿ ಕೊನೆಗೆ ಒಬ್ಬರು ಬೈಬಲ್ ಗ್ರಂಥವನ್ನು ಜೋರಾಗಿ ಓದುತ್ತಿದ್ದರು. ಆದರೂ ಸಹ ಈ ಪ್ರಾರ್ಥನೆ ಅವರಿಗೆ ಪರಿಪೂರ್ಣ ಎನಿಸದ ಕಾರಣ, ಅವರು ಗುಂಪುಗಳಲ್ಲಿ ಬೈಬಲ್ ಅನ್ನು ಪಠಿಸಲು ಆರಂಭಿಸಿದರು.

ಇದು ಕೂಡಲೇ ಎಲ್ಲಾ ಕಡೆ ಹಬ್ಬಿ, ಒಂದು ಮಾದರಿ ಪ್ರಾರ್ಥನೆಯ ಕ್ರಮವಾಗಿ ರೂಪುಗೊಂಡಿದೆ ಎಂದು ಸಿಸ್ಟರ್ ರೀಟಾ ಜಾರ್ಜ್ ಥೈಕೂಟಮ್ ಅವರು ಹೇಳುತ್ತಾರೆ.

04 July 2024, 19:29