'ಇಂಜಿನಿಯರ್ ಬಿಷಪ್' ಎಂದೇ ಖ್ಯಾತರಾಗಿದ್ದ ಬಿಷಪ್ ಜಾರ್ಜ್ ಮಾಮಲಾಸೆರಿ ನಿಧನ

ಮೇಘಾಲಯ ರಾಜ್ಯದ ಟುರಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಜಾರ್ಜ್ ಮಾಮಲಾಸ್ಸೆರಿ ಅವರು ತಮ್ಮ ೯೨ ನೇ ವಯಸ್ಸಿನಲ್ಲಿ ಇಲ್ಲಿನ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಭಾರತದ ಧರ್ಮಸಭೆ ಕಂಬನಿ ಮಿಡಿದಿದೆ.

ವರದಿ: ವ್ಯಾಟಿಕನ್ ನ್ಯೂಸ್

ಮೇಘಾಲಯ ರಾಜ್ಯದ ಟುರಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಜಾರ್ಜ್ ಮಾಮಲಾಸ್ಸೆರಿ ಅವರು ತಮ್ಮ ೯೨ ನೇ ವಯಸ್ಸಿನಲ್ಲಿ ಇಲ್ಲಿನ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಭಾರತದ ಧರ್ಮಸಭೆ ಕಂಬನಿ ಮಿಡಿದಿದೆ.  

ಬಿಷಪ್ ಮಾಮಲಾಸೆರಿ ಅವರು ತಮ್ಮ ೪೬ನೇ ವಯಸ್ಸಿನಲ್ಲಿ ಟುರಾ ಧರ್ಮಕ್ಷೇತ್ರಕ್ಕೆ ಧರ್ಮಾಧ್ಯಕ್ಷರಾಗಿ ನೇಮಕಗೊಂಡರು. ಅದರ ನಂತರ ಅವರು ಸುಮಾರು ೨೬ ನೂತನ ಧರ್ಮಕೇಂದ್ರಗಳನ್ನು ಸ್ಥಾಪಿಸಿ, ಹಲವನ್ನು ವಿಸ್ತರಿಸಿದ್ದಾರೆ ಮಾತ್ರವಲ್ಲದೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಗೈದಿದ್ದಾರೆ.

ಇವರ ಅವಧಿಯುದ್ದಕ್ಕೂ ಅಭಿವೃದ್ಧಿ ಕಾರ್ಯಗಳೇ ನಡೆದ ಕಾರಣ ಇವರನ್ನು ಎಲ್ಲರೂ ಪ್ರೀತಿಯಿಂದ 'ಇಂಜಿನಿಯರ್ ಬಿಷಪ್' ಎಂದರೆ ನೆನೆಯುತ್ತಿದ್ದರು.

ಮೇಘಾಲಯ ರಾಜ್ಯದಲ್ಲಿ ಅಲ್ಲಿನ ಜನತೆಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಗಣನೀಯ ಸಾಧನೆಗಾಗಿ ಇವರಿಗೆ ಮೇಘಾಲಯ ಸರ್ಕಾರವು ತನ್ನ ಪ್ರತಿಷ್ಟಿತ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.      

05 July 2024, 17:47