ಬುಡಕಟ್ಟು ಸಮುದಾಯದೊಂದಿಗೆ ಈಗಲೂ ನಡೆಯುತ್ತಿರುವ ಕೆನಡಾದ ಧರ್ಮಸಭೆ

ಕೆನಡಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯೂ ಅಲ್ಲಿನ ಧರ್ಮಸಭೆ ಈಗಲೂ ಸಹ ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಪಯಣಿಸುತ್ತಿದೆ ಹಾಗೂ ಆ ಮೂಲಕ ಅವರೆಡೆಗಿನ ಬದ್ಧತೆಯನ್ನು ವ್ಯಕ್ತಪಡಿಸುತ್ತಿದೆ ಎಂದು ವರದಿ ಮಾಡಿದೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಕೆನಡಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯೂ ಅಲ್ಲಿನ ಧರ್ಮಸಭೆ ಈಗಲೂ ಸಹ ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಪಯಣಿಸುತ್ತಿದೆ ಹಾಗೂ ಆ ಮೂಲಕ ಅವರೆಡೆಗಿನ ಬದ್ಧತೆಯನ್ನು ವ್ಯಕ್ತಪಡಿಸುತ್ತಿದೆ ಎಂದು ವರದಿ ಮಾಡಿದೆ.

ಪೋಪ್ ಫ್ರಾನ್ಸಿಸ್ ಅವರು ಕೆನಡಾ ದೇಶಕ್ಕೆ "ಪಶ್ಚಾತಾಪಪೂರಿತ ಭೇಟಿ"ಯನ್ನು ಕೈಗೊಂಡು ಎರಡು ವರ್ಷಗಳಾದ ಹಿನ್ನೆಲೆ ಮಾಧ್ಯಮ ವರದಿಯನ್ನು ಬಿಡುಗಡೆ ಮಾಡಿರುವ ಕೆನಡಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯು ಅಲ್ಲಿನ ಧರ್ಮಸಭೆ ಈಗಲೂ ಸಹ ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಪಯಣಿಸುತ್ತಿದೆ ಹಾಗೂ ಆ ಮೂಲಕ ಅವರೆಡೆಗಿನ ಬದ್ಧತೆಯನ್ನು ವ್ಯಕ್ತಪಡಿಸುತ್ತಿದೆ ಎಂದು ಹೇಳಿದೆ.

ಧರ್ಮಸಭೆ ಹಾಗೂ ಅಲ್ಲಿ ಸ್ಥಳೀಯ ಜನಾಂಗಗಳ ನಡುವೆ ಸಂಧಾನ ಹಾಗೂ ಸೌಖ್ಯಕ್ಕಾಗಿ ಕೆನಾಡ ಧರ್ಮಸಭೆಯು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಈ ಮಾಧ್ಯಮ ವರದಿಯಲ್ಲಿ ನಮೂದಿಸಲಾಗಿದೆ.

ಧರ್ಮಾಧ್ಯಕ್ಷರುಗಳೂ ಸಹ ಧರ್ಮಸಭೆಯ ಸಂಸ್ಕಾರಗಳನ್ನು ನೀಡುವುದೂ ಸೇರಿದಂತೆ ಎಲ್ಲಾ ವಿಷಯಗಳಲ್ಲಿಯೂ ಪ್ರಾಮಾಣಿಕತೆಯಿಂದ ಹಾಗೂ ಪಾರದರ್ಶಕತೆಯಿಂದ ಕಾರ್ಯನಿರ್ವಹಿದ್ದಾರೆ ಎಂದು ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ತಿಳಿಸಿದೆ.

"ನಾವೆಲ್ಲರೂ ಒಗ್ಗಟ್ಟಿನಿಂದ ಮುಂದುವರೆಯಬೇಕಾದರೆ ಸಂಧಾನದಿಂದ, ಹಳತನ್ನು ಮರೆತು ಹೊಸ ನಂಬಿಕೆಯಿಂದ ಮುಂದುವರೆಯುವುದೇ ಹಾದಿ" ಎಂದು ಧರ್ಮಾಧ್ಯಕ್ಷರುಗಳು ಅಭಿಪ್ರಾಯ ಪಟ್ಟಿದ್ದಾರೆ. 

27 July 2024, 17:56