ಹುಡುಕಿ

ಪರಮ ಪ್ರಸಾದ ಸಮಾವೇಷದಲ್ಲಿ ನಿಜವಾದ ನವೀಕರಣವಾಗಬೇಕು: ಕಾರ್ಡಿನಲ್ ಪಿಯೆರೆ

ಅಮೇರಿಕಾದ ಇಂಡಿಯಾನ ಪೊಲೀಸ್ ನಗರದಲ್ಲಿ ನಡೆಯುತ್ತಿರುವ ಹತ್ತನೇ ಪರಮ ಪ್ರಸಾದ ಸಮಾವೇಷದ ಕುರಿತು ಮಾತನಾಡಿರುವ ಕಾರ್ಡಿನಲ್ ಪಿಯೆರೆ ಅವರು ಈ ಸಮಾವೇಷದಲ್ಲಿ ನಿಜವಾದ ಆಧ್ಯಾತ್ಮಿಕ ನವೀಕರಣ ನಡೆಯಬೇಕು ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಅಮೇರಿಕಾದ ಇಂಡಿಯಾನ ಪೊಲೀಸ್ ನಗರದಲ್ಲಿ ನಡೆಯುತ್ತಿರುವ ಹತ್ತನೇ ಪರಮ ಪ್ರಸಾದ ಸಮಾವೇಷದ ಕುರಿತು ಮಾತನಾಡಿರುವ ಅಮೇರಿಕಾದ ಪ್ರೇಷಿತ ರಾಯಭಾರಿಯಾಗಿರುವ ಕಾರ್ಡಿನಲ್ ಕ್ರಿಸ್ಟೋಫ್ ಪಿಯೆರೆ ಅವರು ಈ ಸಮಾವೇಷದಲ್ಲಿ ನಿಜವಾದ ಆಧ್ಯಾತ್ಮಿಕ ನವೀಕರಣ ನಡೆಯಬೇಕು ಎಂದು ಹೇಳಿದ್ದಾರೆ. 

ಮುಂದುವರೆದು ಮಾತನಾಡಿದ ಅವರು ತಾನು ಇಲ್ಲಿಗೆ ಪೋಪರ ಪ್ರತಿನಿಧಿಯಾಗಿ ಆಗಮಿಸಿದ್ದು, ಅವರ ಐಕ್ಯತೆ ಹಾಗೂ ಪ್ರೀತಿಯನ್ನು ಕೋರುತ್ತಿರುವುದಾಗಿ ಹೇಳಿದರು. ಇದೊಂದು ಉಡುಗೊರೆಯಾಗಿದ್ದು, ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ಅವರೊಂದಿಗೆ ನಾವು ಒಂದೇ ಧರ್ಮಸಭೆಯಾಗಿ ಒಂದಾಗಬಹುದು ಎಂದು ಅವರು ಹೇಳಿದ್ದಾರೆ.

"ನಿಜವಾದ ನವೀಕರಣ ಎಂದರೆ ನಿರಂತರವಾಗಿ ಪರಮಪ್ರಸಾದ ಹಾಗೂ ಬಲಿಪೂಜೆಯಲ್ಲಿ ಪ್ರಭುವನ್ನು ಸ್ವೀಕರಿಸುವುದು ಹಾಗೂ ಅವರ ಆಜ್ಞೆಗಳಂತೆ ನಡೆಯವುದಾಗಿದೆ" ಎಂದು ಹೇಳಿದ ಕಾರ್ಡಿನಲ್ ಪಿಯೆರೆ "ನಿಜವಾದ ನವೀಕರಣ ಎಂದರೆ ಬೇರೆಯವರಲ್ಲಿ ಅಥವಾ ನಮ್ಮ ನೆರೆಹೊರೆಯವರಲ್ಲಿ ಕ್ರಿಸ್ತರನ್ನು ಕಾಣುವುದಾಗಿದೆ" ಎಂದು ಹೇಳಿದ್ದಾರೆ. ಪ್ರಭು ಕ್ರಿಸ್ತರು ಎಲ್ಲರನ್ನೂ ಒಗ್ಗೂಡಿಸುವ ಸೇತುವೆಯಾಗಿದ್ದು, ಎಲ್ಲರನ್ನೂ ಹಾಗೂ ಎಲ್ಲವನ್ನೂ ಸಹ ನಿಜವಾಗಿಯೂ ಒಂದುಗೂಡಿಸುತ್ತಾರೆ ಎಂದು ಹೇಳಿದ್ದಾರೆ.  

 

18 July 2024, 18:50