ಇಥಿಯೋಪಿಯನ್ ಕಾರ್ಡಿನಲ್: ವಿನಾಶದ ನಡುವೆಯೂ ಭರವಸೆಯಿದೆ

ಇಥಿಯೋಪಿಯಾದ ಕಾರ್ಡಿನಲ್ ಸೌರಾಫಿಯೇಲ್ ಅವರು ತನ್ನ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳು ಹಾಗೂ ಹಿಂಸೆಯ ಕುರಿತು

ವರದಿ: ಫ್ರಾನ್ಸಿಸ್ಕೋ ಮೆರ್ಲೋ, ಅಜಯ್ ಕುಮಾರ್

ಅಡೀಸ್ ಅಬಾಬಾ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಬರ್ತಾನೇಸುಸ್ ಡಿಮೇರೂ ಸೌರಾಫಿಯೇಲ್ ಅವರು ಇತಿಯೋಪಿಯಾದಲ್ಲಿನ ಮಾನವೀಯ ಸಂಘರ್ಷ ಹಾಗೂ ಬಿಕ್ಕಟ್ಟುಗಳನ್ನು ಉದ್ದೇಶಿಸಿ ಸದಾ ಮಾತನಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚಿಗೆ ತಮ್ಮ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು  ಇತಿಯೋಪಿಯ ದೇಶದಲ್ಲಿ ಪ್ರಸ್ತುತ ಸಾಕಷ್ಟು ಆಂತರಿಕ ಸಂಘರ್ಷಗಳಿವೆ. ಆದರೂ ಸಹ ನಾವು ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ  ಹಲವು ಕಾರಣಗಳಿಂದ ಸಾಕಷ್ಟು ಸಂಘರ್ಷಗಳಿವೆ. ಈ ಸಂಘರ್ಷಗಳ ಕಾರಣ ಇಲ್ಲಿನ ಜನರ ಮೇಲೆ ವಿಶೇಷವಾಗಿ ಕ್ರೈಸ್ತರ ಮೇಲೆ ಹಲವು ಭೌತಿಕ ಹಾಗೂ ಆಧ್ಯಾತ್ಮಿಕ ಗಾಯಗಳಾಗಿವೆ. ಇವು ನಮ್ಮನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳಾದರೂ ಸಹ  ನಾವು  ಅವುಗಳನ್ನು ಅನುಭವಿಸಲೇಬೇಕಿದೆ. ಇದೇ ಸಂದರ್ಭದಲ್ಲಿ ಇದು ಶಾಶ್ವತವಲ್ಲ ಮುಂದೆ ನಮಗೂ ಸಹ ಒಳ್ಳೆಯ ದಿನಗಳು ಬರಲಿವೆ ಎಂಬ ಭರವಸೆಯನ್ನು ನಾವು ಸದಾ ಕಾಯ್ದುಕೊಳ್ಳಬೇಕಿದೆ ಎಂದು  ಕಾರ್ಡಿನಲ್ ಹೇಳಿದರು.

ಪ್ರಸ್ತುತ ನಮ್ಮ ದೇಶವನ್ನು ಭಾದಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲರೂ  ಒಟ್ಟಾಗಿ ಬಂದು  ಶಾಂತಿಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಹೀಗೆ ನಾವೆಲ್ಲರೂ  ಒಂದೇ ಉದ್ದೇಶದಿಂದ ಒಟ್ಟು ಸೇರಿದಾಗ ಮಾತ್ರ  ನಮ್ಮ ನಡುವಿನ ಸಮಸ್ಯೆಗಳು ಹಾಗೂ ಅಂತರಗಳು ಕಡಿಮೆಯಾಗಲಿವೆ ಎಂದು ಅವರು ಹೇಳಿದರು. ಉತ್ತಮ ಜೀವನಕ್ಕೆ ಭರವಸೆಯೊಂದೇ ಕಾರಣ ಹಾಗೂ  ಭರವಸೆಯೊಂದೇ ಸದ್ಯಕ್ಕೆ ನಾವು ಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ ಎಂದು ಹೇಳಿದರು.

09 July 2024, 17:13