ಹುಡುಕಿ

ಕಾರ್ಡಿನಲ್ ಟಾಗ್ಲೆ: ಪರಮ ಪ್ರಸಾದ ಸಮಾವೇಶವು ಒಂದು "ಒಂದು ಪವಿತ್ರ ಅನುಭವವಾಗಿತ್ತು"

ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವ್ಯಾಟಿಕನ್ ಸುವಾರ್ತಾ ಪ್ರಸಾರ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟಾಗ್ಲೆ ಅವರು ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕಾದ ಪರಮ ಪ್ರಸಾದ ಸಮಾವೇಶದಲ್ಲಿ ಭಾಗವಹಿಸಿದ್ದರು. ಪರಮ ಪ್ರಸಾದ ಸಮಾವೇಶವು ಒಂದು ಪವಿತ್ರ ಅನುಭವವಾಗಿತ್ತು ಎಂದು ಅವರು ಹೇಳಿದರು.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವ್ಯಾಟಿಕನ್ ಸುವಾರ್ತಾ ಪ್ರಸಾರ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟಾಗ್ಲೆ ಅವರು ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕಾದ ಪರಮ ಪ್ರಸಾದ ಸಮಾವೇಶದಲ್ಲಿ ಭಾಗವಹಿಸಿದ್ದರು. ಪರಮ ಪ್ರಸಾದ ಸಮಾವೇಶವು ಒಂದು ಪವಿತ್ರ ಅನುಭವವಾಗಿತ್ತು ಎಂದು ಅವರು ಹೇಳಿದರು.

ಕಳೆದ ವಾರ ಕಾರ್ಡಿನಲ್ ಅವರು ಪರಮ ಪ್ರಸಾದ ಸಮಾವೇಶದಲ್ಲಿ ಭಾಗವಹಿಸಿ ಮುಕ್ತಾಯ ಬಲಿ ಪೂಜೆಯನ್ನು ನೀಡಿ ಪ್ರಬೋಧನೆಯಲ್ಲಿ ಪರಮ ಪ್ರಸಾದ ಮಹತ್ವದ ಕುರಿತು ಮಾತನಾಡಿದ್ದರು. ಅಮೆರಿಕಾದ ಇಂಡಿಯಾನಾ ಪೊಲೀಸ್ ನಗರದಲ್ಲಿ ನಡೆದ ಪರಮ ಪ್ರಸಾದ ಸಮಾವೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಇದು ಅಮೆರಿಕಾದಲ್ಲಿ ನಡೆದ ಹತ್ತನೇ ಪರಮ ಪ್ರಸಾದ ಸಮಾವೇಶವಾಗಿದ್ದು ಇದರಲ್ಲಿ ಅಮೆರಿಕಾದ ಎಲ್ಲಾ ಧರ್ಮಧ್ಯಕ್ಷರುಗಳು ಕಥೋಲಿಕ ಗುರುಗಳು ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಕಥೋಲಿಕ ಕ್ರೈಸ್ತ ಭಕ್ತಾದಿಗಳು ಭಕ್ತಿಯಿಂದ ಭಾಗವಹಿಸಿದ್ದರು.

25 July 2024, 17:17