ಸಾವಿನ ಅಂಚಿನಲ್ಲಿರುವವರಿಗೆ ಕರುಣೆ ಹಾಗೂ ಆರೈಕೆಯನ್ನು ನೀಡುವಂತೆ ಐರ್ಲೆಂಡಿನ ಧರ್ಮಾದ್ಯಕ್ಷರ ಒಕ್ಕೂಟವು ಕರೆ ನೀಡಿದೆ

ಮಾರಣಾಂತಿಕ ರೋಗಗಳಿಂದ ನರಳುತ್ತಿರುವ ಹಾಗೂ ಸಾವಿನ ಅಂಚಿನಲ್ಲಿರುವ ಜನರಿಗೆ ಕರುಣೆಯನ್ನು ಹಾಗೂ ಹಾರೈಕೆಯನ್ನು ನೀಡುವಂತೆ ಐರ್ಲೆಂಡಿನ ಧರ್ಮಾದ್ಯಕ್ಷರ ಒಕ್ಕೂಟವು ಕರೆ ನೀಡಿದೆ.

ವರದಿ: ತದ್ದೆಯೂಸ್ ಜೋನ್ಸ್, ಅಜಯ್ ಕುಮಾರ್

ಐರಿಷ್ ಕಥೋಲಿಕ ಧರ್ಮಾಧ್ಯಕ್ಷರುಗಳ ಒಕ್ಕೂಟವು ಮಾರಣಾಂತಿಕ ರೋಗಗಳಿಂದ ನರಳುತ್ತಿರುವ ಹಾಗೂ ಸಾವಿನ ಅಂಚಿನಲ್ಲಿರುವ ಜನರಿಗೆ ಕರುಣೆಯನ್ನು ಹಾಗೂ ಆರೈಕೆಯನ್ನು ನೀಡುವಂತೆ  ಕರೆ ನೀಡಿದೆ. ಈ ಹಿನ್ನಲೆಯಲ್ಲಿ  "ಸಾಯುವ ತನಕ ಸ್ವಾತಂತ್ರ್ಯವಾಗಿ ಜೀವಿಸುವ ಹಕ್ಕು" ಎಂಬ ದಾಖಲೆಯನ್ನು ಸಹ ಬಿಡುಗಡೆ ಮಾಡಿದೆ.

ಜೂನ್ ತಿಂಗಳ ಕೊನೆಯಲ್ಲಿ ತಮ್ಮ ಪಾಲನಾ ಪತ್ರವನ್ನು ಬಿಡುಗಡೆ ಮಾಡಿರುವ ಧರ್ಮಾಧ್ಯಕ್ಷರುಗಳ ಒಕ್ಕೂಟವು,  ಮರಣದ ಅಂಚಿನಲ್ಲಿರುವ ಜನರನ್ನು ಹೇಗೆ ಕಾಣಬೇಕು ಹಾಗೂ ಅವರಿಗೆ ಯಾವ ರೀತಿಯ ಆಧ್ಯಾತ್ಮಿಕ ಹಾಗೂ ಭೌತಿಕ ನೆರವನ್ನು ನೀಡಬೇಕು ಎಂಬುವ ನಿಟ್ಟಿನಲ್ಲಿ ಧರ್ಮಸಭೆಯು ಭೋಧಿಸುವ ಬೋಧನೆಗಳ ಕುರಿತು ಮಾಹಿತಿಯನ್ನು ಒಳಗೊಂಡಿದೆ ಮಾತ್ರವಲ್ಲದೆ ಆ ಕುರಿತು ಒಂದು ವಿಡಿಯೋ ಸಹ ಇದು ಒಳಗೊಂಡಿದೆ.

"ಜೀವ ಅಥವಾ ಜೀವನವನ್ನು  ಅಗತ್ಯಕ್ಕಿಂತ ಹಾಗೂ ಅಸ್ವಭಾವಿಕವಾಗಿ ಹೆಚ್ಚು ಮಾಡುವಂತಹ ಯಾವುದೇ ಕ್ರಮಗಳನ್ನು ಧರ್ಮಸಭೆಯು ತನ್ನ ಭಕ್ತಾದಿಗಳಿಗೆ ತೆಗೆದುಕೊಳ್ಳುವಂತೆ ಹೇಳಿರುವುದಿಲ್ಲ ಹಾಗೂ ಅದೇ ರೀತಿ, ತಮಗೆ ಇಷ್ಟವಿಲ್ಲದ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಲೇಬೇಕು ಎಂದು ಸಾವಿನ ಅಂಚಿನಲ್ಲಿರುವ ಜನರಿಗೆ ಒತ್ತಾಯವನ್ನು ಸಹ ಮಾಡಿರುವುದಿಲ್ಲ. ಆದರೆ ಮತ್ತೊಬ್ಬರ ನೆರವಿನಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಧರ್ಮಸಭೆಯು ಎಂದಿಗೂ ಒಪ್ಪುವುದಿಲ್ಲ" ಎಂದು ಈ ದಾಖಲೆಯು ಸ್ಪಷ್ಟವಾಗಿ ಮಾಹಿತಿಯನ್ನು ನೀಡುತ್ತದೆ.

09 July 2024, 16:47