ಬಿಷಪ್ ಕೋಜೆನ್ಸ್: ಅಮೆರಿಕಾದ ಪರಮ ಪ್ರಸಾದ ಸಮಾವೇಶದಲ್ಲಿ ಅದ್ಭುತಗಳನ್ನು ನಿರೀಕ್ಷಿಸುತ್ತಿದ್ದೇವೆ
ವರದಿ: ಕ್ರಿಸ್ಟೋಫರ್ ವೆಲ್ಸ್, ಜೋಸೆಫ್ ತಲ್ಲೊಚ್, ಅಜಯ್ ಕುಮಾರ್
ಅಮೆರಿಕಾದ ಇಂಡಿಯನ್ ಪೊಲೀಸ್ ನಗರಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದಾರೆ. ಅಮೆರಿಕದಲ್ಲಿ ನಡೆಯಲಿರುವ ಪರಮ ಪ್ರಸಾದ ಸಮಾಾವೇಶಕ್ಕೆ ಹಮ್ಮಿಕೊಂಡಿರುವ ಯಾತ್ರಿಕ ಪಯಣಕ್ಕೆ ಇಂದು ಕೊನೆಯ ದಿನವಾಗಿದ್ದು, ಇಂದಿನಿಂದ ಇಂಡಿಯನ್ ಪೊಲೀಸ್ ನಗರದಲ್ಲಿ ಪರಮ ಪ್ರಸಾದ ಸಮಾವೇಶವು ಆರಂಭಗೊಂಡಿದೆ.
ಇದು ಅಮೆರಿಕಾದಲ್ಲಿ ನಡೆಯುತ್ತಿರುವ ಹತ್ತನೇ ಪರಮ ಪ್ರಸಾದ ಸಮಾವೇಶವಾಗಿದ್ದು, ಇಂಡಿಯಾನಾ ಪೊಲೀಸ್ ನಗರದ ಆರ್ಚ್'ಬಿಷಪ್ ಥಾಮ್ಸನ್ ಅವರು ಅನೇಕ ಧರ್ಮಧ್ಯಕ್ಷರುಗಳ ಜೊತೆಗೂಡಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಇದೆ ವೇಳೆ, ಪರಮ ಪ್ರಸಾದ ಸಮಾವೇಶಕ್ಕೆ ವಿಶ್ವಗುರು ಫ್ರಾನ್ಸಿಸ್ ಅವರ ಪ್ರತಿನಿಧಿಯಾಗಿರುವ ಕಾರ್ಡಿನಲ್ ಲೂಯಿಸ್ ಅಂತೋನಿಯಾ ತಾಗ್ಲೆ ಅವರು ಸಹ ಇದರಲ್ಲಿ ಭಾಗವಹಿಸಿದ್ದರು.
ಈ ಪರಮ ಪ್ರಸಾದ ಸಮಾವೇಶದ ಮೂಲ ಉದ್ದೇಶವೆಂದರೆ ಎಲ್ಲರೂ ಸಹ ಕರುಣೆಯ ಸೇವಾಕರ್ತರಾಗಲು ಕರೆಯನ್ನು ಹೊಂದಿದ್ದಾರೆ ಎಂಬುದನ್ನು ಮನದಟ್ಟು ಮಾಡುವುದಾಗಿದೆ. ಈ ಕುರಿತು ಮಾತನಾಡಿರುವ ಧರ್ಮಧ್ಯಕ್ಷ ಕೋಜೆನ್ ಅವರು, ಈ ಪರಮ ಪ್ರಸಾದ ಸಮಾವೇಶದಲ್ಲಿ ನಾವು ಅದ್ಭುತಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.