ಒಲಂಪಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿನ ಕ್ರೈಸ್ತ ಧರ್ಮ ವಿರೋಧಿ ಅಂಶಗಳಿಂದ ನೋವಾಗಿದೆ: ಫ್ರೆಂಚ್ ಧರ್ಮಾಧ್ಯಕ್ಷರ ಮಂಡಳಿ
ಒಲಂಪಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಡು ಬಂದ ಕೆಲವು ಕ್ರೈಸ್ತ ಧರ್ಮ ವಿರೋಧಿ ಹಾಗೂ ಕ್ರೈಸ್ತ ಧರ್ಮವನ್ನು ಅಣಕ ಮಾಡುವಂತಹ ದೃಶ್ಯಗಳಿಂದ ಬಹಳ ನೋವಾಗಿದೆ ಎಂದು ಫ್ರೆಂಚ್ ಧರ್ಮಾಧ್ಯಕ್ಷರ ಮಂಡಳಿಯು ಇಂದು ಬಿಡುಗಡೆ ಮಾಡಿರುವ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ವರದಿ: ಜಿಯಾನ್ ಬೆನ್ವಾ ಹಾರೆಲ್, ಅಜಯ್ ಕುಮಾರ್
ಒಲಂಪಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಡು ಬಂದ ಕೆಲವು ಕ್ರೈಸ್ತ ಧರ್ಮ ವಿರೋಧಿ ಹಾಗೂ ಕ್ರೈಸ್ತ ಧರ್ಮವನ್ನು ಅಣಕ ಮಾಡುವಂತಹ ದೃಶ್ಯಗಳಿಂದ ಬಹಳ ನೋವಾಗಿದೆ ಎಂದು ಫ್ರೆಂಚ್ ಧರ್ಮಾಧ್ಯಕ್ಷರ ಮಂಡಳಿಯು ಇಂದು ಬಿಡುಗಡೆ ಮಾಡಿರುವ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಮೊನ್ನೆ ನಡೆದ ಒಲಂಪಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೇಸುಕ್ರಿಸ್ತರ ಕೊನೆಯ ಭೋಜನದ ದೃಶ್ಯದಂತೆ ಮತ್ತೊಂದು ದೃಶ್ಯವನ್ನು ಮರು ರೂಪಿಸುವ ಮೂಲಕ ಅದನ್ನು ಅಣಕ ಮಾಡಲಾಗಿತ್ತು. ಇದು ವಿಶ್ವದಾದ್ಯಂತ ದೊಡ್ಡ ಮಟ್ಟಿಗಿನ ಟೀಕೆಗಳಿಗೆ ಕಾರಣವಾಗಿತ್ತು.
ಇದನ್ನು ಖಂಡಿಸಿ, ಫ್ರೆಂಚ್ ಧರ್ಮಾಧ್ಯಕ್ಷರ ಮಂಡಳಿಯು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಒಲಂಪಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲವೂ ಸರಿಯಿತ್ತು ಆದರೆ, ಕ್ರೈಸ್ತ ಧರ್ಮದ ಅಣಕ ಬೇಡವಾಗಿತ್ತು. ಇದರಿಂದ ಕ್ರೈಸ್ತರಿಗೆ ನೋವಾಗಿದೆ ಎಂದು ಹೇಳಿದರು.
ವಿವಿಧ ಧರ್ಮದ ನಾಯಕರುಗಳೂ ಸಹ ಇದನ್ನು ಟೀಕಿಸಿದ್ದಾರೆ ಎಂದು ವರದಿಯಾಗಿದೆ.
28 July 2024, 18:34