ಹೈಟಿ ದೇಶದಲ್ಲಿ ಅಪಹರಣಗೊಂಡಿದ್ದ ಕಥೋಲಿಕ ಗುರುವಿನ ಬಿಡುಗಡೆ
ವರದಿ: ವ್ಯಾಟಿಕನ್ ನ್ಯೂಸ್
ಯುದ್ಧಗ್ರಸ್ಥ ಹೈಟಿ ದೇಶದಲ್ಲಿ ಜೂನ್ ೩೦ ರಂದು ಶಸ್ತ್ರಧಾರಿ ಗುಂಪುಗಳು ಜೆಸ್ಸಿಯರ್ ಎಂಬ ಪಾಲಿಕೆ ಪ್ರದೇಶದ ಮೇಲೆ ದಾಳಿ ಮಾಡಿದ್ದು, ೨೦ ಜನರನ್ನು ಕೊಂದಿದೆ. ಈ ಸಂಧರ್ಭದಲ್ಲಿ ಪೋರ್ಟ್ ಔ ಪ್ರಿನ್ಸ್ ಮಹಾಧರ್ಮಕ್ಷೇತ್ರದ ಫಾದರ್ ಇಮ್ಯಾನುವೇಲ್ ಅವರನ್ನು ಇವರು ಅಪಹರಿಸಿದ್ದರು. ಇದೀಗ ಈ ಗುರು ಬಿಡುಗಡೆಯಾಗಿ ಬಂದಿದ್ದಾರೆ.
ಫಾದರ್ ಇಮ್ಯಾನುವೇಲ್ ಸೈಂತೇಲಿಯಾತ್ ಅವರು ಶಸ್ತ್ರಧಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದರು. ಜೂನ್ ೩೦ ರಂದು ಜೆಸ್ಸಿಯರ್ ಎಂಬ ಪಾಲಿಕೆ ಪ್ರದೇಶದ ಮೇಲೆ ದಾಳಿದ ಮಾಡಿದ ದುಷ್ಕರ್ಮಿಗಳು ಇಲ್ಲಿ ಇಪ್ಪತ್ತು ಜನರನ್ನು ಕೊಂದು ಹಾಕಿದರು. ಇದೇ ವೇಳೆ ಅಲ್ಲಿನ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ದೇವಾಲಯದ ಧರ್ಮಗುರುವಾಗಿದ್ದ, ಇವರನ್ನು ಅಪಹರಿಸಿದ್ದರು. ತದನಂತರ ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ.
ಫಾದರ್ ಇಮ್ಯಾನುವೇಲ್ ಸೈಂತೇಲಿಯಾತ್ ಅವರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂಬ ವಿಚಾರವನ್ನು ಪೋರ್ಟ್ ಔ ಪ್ರಿನ್ಸ್ ಮಹಾಧರ್ಮಕ್ಷೇತ್ರದ ಅಧಿಕಾರಿ ಗುರುಗಳು ಖಚಿತ ಮಾಹಿತಿ ನೀಡಿದ್ದಾರೆ. ಇದೇ ವೇಳೆ ದೇಶದಲ್ಲಿ ನಡೆಯುತ್ತಿರುವ ಹಿಂಸೆ ಇತಿಶ್ರೀ ಹಾಡಬೇಕೆಂದು ಅವರು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಮಾಡಿದ್ದಾರೆ.